ಗಂಗಾನಗರದಲ್ಲಿ ಜನಾ ರೆಡ್ಡಿಗೆ ಸರ್ಪಗಾವಲು

ಬಿಗಿ ಭದ್ರತೆಗಾಗಿ ಒಬ್ಬರು ಡಿಸಿಪಿ, ಮೂವರು ಎಸಿಪಿ, 10 ಇನ್ಸ್‌ಪೆಕ್ಟರ್, 20 ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಹಾಗು 120 ಪೇದೆಗಳನ್ನು ನಿಯೋಜಿಸಲಾಗಿದೆ. ರಾಜ್ಯ ಮೀಸಲು ಪೊಲೀಸ್ ಪಡೆಯ ತುಕಡಿಯೊಂದನ್ನು ಅಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಕಾಲಕಾಲಕ್ಕೆ ಭದ್ರತೆಯ ತಪಾಸಣೆ ನಡೆಸಲಾಗುತ್ತಿದೆ. ಶನಿವಾರ ಬೆಳಿಗ್ಗೆಯೇ ಶ್ವಾನದಳ ಮತ್ತು ಬಾಂಬ್ ಪತ್ತೆ ದಳದ ಸಿಬ್ಬಂದಿ ಸಿಬಿಐ ಕಚೇರಿಗೆ ಭೇಟಿ ನೀಡಿ ಮೂಲೆಮೂಲೆಯಲ್ಲೂ ಪರಿಶೀಲನೆ ನಡೆಸಿದರು.
ವಕೀಲರ ಉಪಸ್ಥಿತಿ: ಸಿಬಿಐ ಕಚೇರಿ ಆವರಣ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಸಿಬಿಐ ಅಧಿಕಾರಿಗಳು, ತನಿಖಾ ಸಂಸ್ಥೆ ಮತ್ತು ಆರೋಪಿಗಳ ಪರ ವಕೀಲರ ಹೊರತಾಗಿ ಯಾರಿಗೂ ಅತ್ತ ಸುಳಿಯಲು ಅವಕಾಶವಿಲ್ಲ. ವಿಚಾರಣೆ ಮುಗಿಯುವವರೆಗೆ ಯಾವುದೇ ವಿಷಯವನ್ನು ಬಹಿರಂಗ ಪಡಿಸುವುದಿಲ್ಲ ಎಂದು ಸಿಬಿಐ ಮೂಲಗಳು ಸ್ಪಷ್ಟಪಡಿಸಿವೆ. ಆದ್ದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿಲ್ಲ.
ಆರೋಪಿಗಳ ಪರ ವಕೀಲರ ಹಾಜರಿಯಲ್ಲೇ ಇಬ್ಬರನ್ನೂ ಪ್ರಶ್ನಿಸಲಾಗುತ್ತಿದೆ. ಶನಿವಾರ ರೆಡ್ಡಿ ಪರ ವಕೀಲರೊಬ್ಬರು ವಿಚಾರಣೆ ವೇಳೆ ಹಾಜರಿದ್ದರು. ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳು, ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ದಾಖಲೆಗಳ ಬಗ್ಗೆ ವಕೀಲರ ಉಪಸ್ಥಿತಿಯಲ್ಲೇ ಪ್ರಶ್ನಿಸಲಾಗಿದೆ. ಸಿಬಿಐ ಪೊಲೀಸರು ಮತ್ತು ಆರೋಪಿ ಪರ ವಕೀಲರ ಹೊರತಾಗಿ ಯಾರೂ ಅಲ್ಲಿರಲಿಲ್ಲ.












Click it and Unblock the Notifications