ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾಳ ವಕೀಲರು: ಜಡ್ಜ್ ಬೂದಿಹಾಳ್ ಸಾಕ್ಷಿಯಾಗಬಲ್ಲರೇ?

By Srinath
|
Google Oneindia Kannada News

bng-advocates-attack-judge-n-budihal-mar2
ಬೆಂಗಳೂರು, ಮಾ.3: ನಿನ್ನೆಯ ಕರಾಳ ಶುಕ್ರವಾರ ಇನ್ನೂ ಕಾಡುತ್ತಿದೆ. ಆದರೆ ಸರಕಾರ ಮಾತ್ರ ಯಾವುದೇ ಸಾಕ್ಷ್ಯಾಧಾರವಿಲ್ಲದೆ ಕರಾಳರ ವಿರುದ್ಧ ಕ್ರಮ ಕೈಗೊಳ್ಳೊಲ್ಲ ಅಂತ ಹಿಂಜರಿದಿದೆ. ಈ ಸಂದರ್ಭದಲ್ಲಿ ಪುಂಡ ವಕೀಲರಿಂದ ಸಮಾ ಏಟು ತಿಂದ ಜಡ್ಜ್ ಬೂದಿಹಾಳ್ ಸಾಕ್ಷಿಯಾಗಬಲ್ಲರೇ? ಖುದ್ದಾಗಿ ಮುಂದೆ ಬಂದು ನ್ಯಾಯದೇವತೆಯ ಅಂಗಳದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಸ್ವಾನುಭವವನ್ನು ಹೇಳುತ್ತಾರಾ?

ಪುಂಡಾಟಿಕೆ ನಡೆಸಲೇಬೇಕು ಎಂದು ನಿರ್ಧರಿಸಿದವರಿಗೆ ಜಡ್ಜ್ ಆದರೇನು, ಅವರ ಆದೇಶವನ್ನು ದಾಖಲಿಸುವ ಸ್ಟೆನೋ ಆದರೇನು? ನಿನ್ನೆಯ ಕರಾಳ ಶುಕ್ರವಾರದಂದು ಸಿಟಿ ಸಿವಿಲ್ ಕೋರ್ಟಿನಲ್ಲಿ ಪುಂಡ ವಕೀಲರು ಅಕ್ಷರಶಃ ಎಲ್ಲರ ಮೇಲೂ ಹಲ್ಲೆಗೈದು ವಿಜೃಂಭಿಸಿದ್ದಾರೆ.

ಏನಾಯಿತೆಂದರೆ, ಕೋರ್ಟ್ ಆವರಣದಲ್ಲಿ ಏನಾಗುತ್ತಿದೆ ಎಂದು ನೋಡಲು ಸಹಜ ಕುತೂಹಲದಿಂದ ಜಡ್ಜ್ ಬೂದಿಹಾಳ್ ಅವರು ಹೊರ ಬಂದಿದ್ದಾರೆ. ಆದರೆ ಅಲ್ಲಿದ್ದ ಗುಂಪಿನಲ್ಲಿ ಯಾವೋನೋ ಪುಂಡ ವಕೀಲ ಬೂದಿಹಾಳ್ ಅವರ ಮೇಲೂ ಮುಗಿಬಿದ್ದಿದ್ದಾನೆ. 'ಏ ನಾನಪ್ಪಾ ನಿಮ್ಮ ಜಡ್ಜು' ಎಂದು ಹೇಳುತ್ತಿದ್ದಾರೂ ಅವ ಬೂದಿಹಾಳರನ್ನು ಮತ್ತಷ್ಟು ಚಚ್ಚುತ್ತಾ, ಅಲ್ಲಿದ್ದ ತನ್ನ ಪಟಾಲಂನ ಇತರರಿಗೂ ಹೊಡೆಯಲು ಪ್ರೇರೇಪಿಸಿದ್ದಾನೆ.

ಜಡ್ಜ್ ಬೂದಿಹಾಳ್ ಅವರನ್ನು ಪುಂಡಪೋಕರಿಗಳಿಂದ ಪಾರು ಮಾಡಿದ ಕೋರ್ಟ್ ಸಿಬ್ಬಂದಿಯೇ ಈ ಘಟನೆಯನ್ನು ವಿವರಿಸಿದ್ದಾರೆ.

English summary
On a lawless-day in Bangalore on Mar 2 a high drama was witnessed outside the civil court when unruly lawyers attacked mediapersons. In the ruckus even Senior Civil Court Judge N Budihal also beaten.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X