ಪತ್ರಕರ್ತರ ಮೇಲೆ ಹಲ್ಲೆ: ವಕೀಲರ ಬಂಧನ

ಕೊಲೆ ಯತ್ನ, ದಂಗೆ, ಪ್ರಾಣ ಬೆದರಿಕೆ, ಮಾಧ್ಯಮದವರ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ವಕೀಲರ ಮೇಲೆ ಒಟ್ಟು 31 ಕೇಸ್ ದಾಖಲಾಗಿದ್ದು, ಇನ್ನೂ ಉಳಿದ ವಕೀಲರು ಸದ್ಯದಲ್ಲೇ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ. ನಗರದ ಪೋಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿಯವರು ದೂರವಾಣಿಯಲ್ಲಿ ಸಿಎಂ ಸದಾನಂದ ಗೌಡ ಆವರಿಗೆ ಈ ಬಗ್ಗೆ ವಿವರಿಸಿದ್ದಾರೆ. ನಗರದ ಹಲಸೂರ್ ಗೇಟ್ ಪೋಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವಕೀಲರಾದ ರಾಮಾಂಜನೇಯ, ನಾರಾಯಣಸ್ವಾಮಿ, ದೇವೇಂದ್ರ, ಮುನಿಸ್ವಾಮಿ, ಮೋಹನ್ ದೊರೆ, ಶ್ರೀನಿವಾಸ, ವೆಂಕಟರಾಮ ರೆಡ್ಡಿ, ಪ್ರಸಾದ್ ಕುಮಾರ್, ಲಕ್ಷ್ಮಣ್, ಸಂದೀಪ್ ಸೆಟ್ಟಿ, ರಮೇಶ್, ಮಂಜುನಾಥ್ ಸೇರಿದಂತೆ ೨೫ ವಕೀಲರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ. ಇವರಿಗೆ ಐಪಿಸಿಯ ಯಾವ ಸೆಕ್ಷನ್ ನಲ್ಲೂ ಜಾಮೀನು ಸಿಗುವ ಸಾಧ್ಯತೆ ಕಮ್ಮಿ ಎಂದು ಕೆಲವೊಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ವಕೀಲರ ಪುಂಡಾಟಿಕೆಯ ವಿರುದ್ದ ರಾಜ್ಯಾದ್ಯಂತ ಭಾರೀ ಪ್ರತಿಭಟನೆ ಇಂದು ನಡೆದಿತ್ತು. ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ವಕೀಲರ ದುಂಡಾವರ್ತನೆಯ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications