ಕ್ಷೇತ್ರದ ಹಳೆ ಹುಲಿ ಬೋಜೇಗೌಡ ವ್ಯಕ್ತಿಚಿತ್ರ

ಜುಲೈ 20, 1957ರಲ್ಲಿ ಜನಿಸಿರುವ ಬೋಜೇಗೌಡರು ಚಿಕ್ಕಮಗಳೂರು ಹೊಸಮನೆ ಬಡಾವಣೆ ನಿವಾಸಿಯಾಗಿದ್ದು, ಖ್ಯಾತ ವಕೀಲರಾಗಿದ್ದಾರೆ. ಬಿಎಸ್ಸಿ, ಎಲ್ ಎಲ್ ಬಿ ವಿದ್ಯಾರ್ಹತೆ ಯೊಂದಿಗೆ ಸಿವಿಲ್ ಲಾಯರ್ ಆಗಿದ್ದಾರೆ.
ನಗರಪಾಲಿಕೆ ಮಾಜಿ ಅಧ್ಯಕ್ಷ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ, ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಸದಸ್ಯ, ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ.
ಬೋಜೇಗೌಡರ ದೂರವಾಣಿ ಸಂಪರ್ಕ: 99450 30221, 08262 230221
ಇಮೇಲ್: [email protected]
ಬೋಜೇಗೌಡರನ್ನು ಏಕೆ ಕಣಕ್ಕಿಳಿಸಿದ್ದು?: ಪದವೀಧರ ಕ್ಷೇತ್ರದಿಂದ ಈ ಭಾಗದಲ್ಲಿ ವಿಧಾನ ಪರಿಷತ್ ಚುನಾವಣೆಗೆ ನಿಲ್ಲಿಸುವ ಯೋಚನೆ ನಮಗಿತ್ತು. ಈ ಹಿನ್ನೆಲೆಯಲ್ಲಿ ಅವರು ಈಗಾಗಲೇ ಕುಂದಾಪುರ, ಕಾರ್ಕಳ, ಮಂಗಳೂರುಗಳಲ್ಲಿ ತಮ್ಮ ಚುನಾವಣಾ ಪ್ರಚಾರ ನಡೆಸಿದ್ದಾರೆ.
ಅವರೊಬ್ಬ ಉತ್ತಮ ವಕೀಲ ರಾಗಿರುವುದರಿಂದ, ಬಾರ್ ಕೌನ್ಸಿಲ್‌ನ ಸದಸ್ಯರಾ ಗಿರುವುದರಿಂದ ಹೊಸದಿಲ್ಲಿಯಲ್ಲೂ ಅವರು ಪರಿಚಿತರಾಗಿದ್ದು, ಅವರು ಲೋಕಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಸಮರ್ಥ ಅಭ್ಯರ್ಥಿ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications