ಮಾ.2ರೊಳಗೆ ರೆಡ್ಡಿ ಬೆಂಗಳೂರು ಸಿಬಿಐ ಕೋರ್ಟಿಗೆ

ktk-illegal-mining-bng-cbi-reddy-pt-warrant
ಹೈದರಾಬಾದ್, ಫೆ.29: ಹೈದರಾಬಾದ್, ಫೆ.29: ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪದ ಮೇಲೆ ಮಾಜಿ ಮಂತ್ರಿ ಜನಾರ್ದನ ರೆಡ್ಡಿ ವಿರುದ್ಧ ಬೆಂಗಳೂರು ಸಿಬಿಐ ಪೊಲೀಸರೂ ಸಹ ಪ್ರಕರಣ ದಾಖಲಿಸಿಕೊಂಡಿದ್ದು, ಅವರನ್ನು ಚಂಚಲಗೂಡ ಜೈಲಿನಿಂದ ಕರೆತರಲು ಹೈದರಾಬಾದಿಗೆ ಮಂಗಳವಾರ ಹೊರಟಿದ್ದಾರೆ. ರೆಡ್ಡಿಯನ್ನು ಕರ್ನಾಟಕದ ಸಿಬಿಐ ಪೊಲೀಸರು ಬಂಧಿಸಿದರೆ ಈ ಪ್ರಕರಣಕ್ಕೆ ಸಂಬಂಧಿಸಿದ ಮೊದಲ ಬಂಧನ ಅವರದ್ದಾಗಲಿದೆ.

ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯ ಹೊರಡಿಸಿರುವ Prisoner on Transit warrant ಅನ್ನು ಬೆಂಗಳೂರು ಸಿಬಿಐ deputy inspector general R. Hitendra ಅವರು ಆಂಧ್ರ ಜೈಲು ಪೊಲೀಸ್ ಮುಖ್ಯಸ್ಥ ಸುನಿಲ್ ಕುಮಾರ್ ಅವರಿಗೆ ಹಸ್ತಾಂತರಿಸಿದ್ದು, ಸಿಬಿಐ ಜಂಟಿ ನಿರ್ದೆಶಕ ವಿವಿ ಲಕ್ಷ್ಮಿನಾರಾಯಣ ಅವರ ಗಮನಕ್ಕೂ ತಂದಿದ್ದಾರೆ. ಮಾರ್ಚ್ 2ರೊಳಗಾಗಿ ರೆಡ್ಡಿಯನ್ನು ಕೋರ್ಟಿನಲ್ಲಿ ಹಾಜರುಪಡಿಸಬೇಕಾಗಿದೆ.

ಆದ್ದರಿಂದ ಬೆಂಗಳೂರು ಸಿಬಿಐ ತಂಡ ಇಂದೋ ಅಥವಾ ನಾಳೆಯೋ ಬೆಂಗಳೂರು ಕೋರ್ಟಿನಲ್ಲಿ ರೆಡ್ಡಿಯನ್ನು ಹಾಜರುಪಡಿಸುವ ಸಾಧ್ಯತೆಯಿದೆ. ನಂತರ, ಕೋರ್ಟ್ ಅವರನ್ನು ವಿಚಾರಣೆಗಾಗಿ ಸಿಬಿಐ ಕಸ್ಟಡಿಗೆ ಒಪ್ಪಿಸಿದರೆ ರೆಡ್ಡಿ ಸಿಬಿಐ ವಶಕ್ಕೆ ಹೋಗಬೇಕಾಗುತ್ತದೆ. ಇಲ್ಲವಾದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಬೇಕಾಗುತ್ತದೆ.

ಆ ನಂತರ ಹೈದರಾಬಾದ್ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದರೂ ರೆಡ್ಡಿ ಬೆಂಗಳೂರು ಜೈಲುವಾಸ ಮುಂದುವರಿಯಲಿದೆ. ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನೀಡಿದಾಗ ಮಾತ್ರ ಅವರು ಸ್ವತಂತ್ರ ಹಕ್ಕಿಯಾಗಬಹುದು.

ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಹಾಗೂ ಮಾಜಿ ಗಣಿ ಮಂತ್ರಿ ಶಿಡ್ಲಘಟ್ಟದ ಮುನಿಯಪ್ಪ ಸೇರಿದಂತೆ ಒಟ್ಟು 12 ಮಂದಿಯನ್ನು ಸಹ ಆರೋಪಿಗಳನ್ನಾಗಿಸಿದೆ. ಇದರಿಂದ ರೆಡ್ಡಿ ಪತ್ನಿ ಅರುಣಾ ಸೇರಿದಂತೆ ಎಲ್ಲರಿಗೂ ಸಮನ್ಸ್ ಜಾರಿ ಮಾಡಿದೆ.

ಪ್ರಕರಣ ಏನು?: ಅಸೋಸಿಯೇಟೆಡ್‌ ಮೈನಿಂಗ್‌ ಕಂಪನಿ (ಎಎಂಸಿ)ಯು ಕರ್ನಾಟಕದಲ್ಲಿ ನಡೆಸಿದ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸುವಂತೆ ಸುಪ್ರಿಂಕೋರ್ಟ್‌ ಕರ್ನಾಟಕದ ಸಿಬಿಐ ಪೊಲೀಸರಿಗೆ ನಿರ್ದೇಶಿಸಿತ್ತು. ನ್ಯಾಯಾಲಯದ ಆದೇಶದಂತೆ, ಕರ್ನಾಟಕದ ಸಿಬಿಐ ಪೊಲೀಸರು ಒಎಂಸಿ ಕಂಪನಿಯ ಮಾಲಿಕ ಜನಾರ್ದನ ರೆಡ್ಡಿ ವಿರುದ್ಧ ಕಳೆದ ಅಕ್ಟೋಬರ್‌ ತಿಂಗಳಲ್ಲಿ ಎಫ್ಐಆರ್‌ ದಾಖಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+