ಕತಾರ್, ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರ

ಗಲ್ಫ್ ರಾಷ್ಟ್ರ ಕತರ್ 17 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಅತ್ಯಂತ ಗರಿಷ್ಠ ತಲಾ ಆದಾಯದ ದಾಖಲೆ(GDP)ಯನ್ನು ಪಡೆದಿದೆ. ಹೆಚ್ಚುತ್ತಿರುವ ತೈಲ ಬೆಲೆ ಹಾಗೂ ರಾಷ್ಟ್ರದಲ್ಲಿನ ನೈಸರ್ಗಿಕ ಅನಿಲ ನಿಕ್ಷೇಪವು ಕೂಡಾ ಈ ರಾಷ್ಟ್ರವು ಹೆಚ್ಚು ಶ್ರೀಮಂತವಾಗಲು ಕಾರಣವಾಗಿದೆ.
2002ರಲ್ಲಿ ವಾಲಿಬಾಲ್ ವರ್ಲ್ಡ್‌ಕಪ್ ಪಂದ್ಯಾಟದ ಆತಿಥ್ಯ ವಹಿಸಲಿರುವ ಕತಾರ್, 2020ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ನಿರ್ವಹಿಸುವಲ್ಲಿಯೂ ಮುಂಚೂಣಿಯಲ್ಲಿ ನಿಂತಿದೆ.
2022ರ ವಿಶ್ವಕಪ್ ಪಂದ್ಯಾಟವನ್ನು ಗಮನದಲ್ಲಿರಿಸಿಕೊಂಡಿರುವ ಇಲ್ಲಿನ ಸರ್ಕಾರ, ಆಳಸಮುದ್ರ ಬಂದರು, ವಿಮಾನ ನಿಲ್ದಾಣ ಹಾಗೂ ರೈಲ್ವೆ ಜಾಲ ಸೇರಿದಂತೆ ರಾಷ್ಟ್ರದ ಮೂಲ ಸೌಲಭ್ಯಗಳ ಅಭಿವೃದ್ಧಿಗಾಗಿ ಹೆಚ್ಚಿನ ಹಣವನ್ನು ಸುರಿಯುತ್ತಿದೆ ಎಂದು 'ಫೋರ್ಬ್ಸ್" ತಿಳಿಸಿದೆ.
ಎರಡನೆಯ ಸ್ಥಾನವನ್ನು ಲುಕ್ಸಂಬರ್ಗ್ ಪಡೆದಿದ್ದರೆ, ಮೂರನೆಯ ಸ್ಥಾನವನ್ನು ಸಿಂಗಾಪುರ ಗಳಿಸಿಕೊಂಡಿದೆ. ರಾಷ್ಟ್ರಗಳ ಶ್ರೇಣೀಕರಣದ ವೇಳೆ ಆ ರಾಷ್ಟ್ರಗಳ ತಲಾ ಆದಾಯ(gross domestic product)ವನ್ನು ಪರಿಗಣಿಸಲಾಗಿದೆ ಎಂದು 'ಫೋರ್ಬ್ಸ್" ಹೇಳಿದೆ.
ನಾರ್ವೆ ಹಾಗೂ ಬ್ರೂನಿ ಐದನೆ ಸ್ಥಾನವನ್ನು ಹಂಚಿಕೊಂಡಿದ್ದರೆ, ಅನಂತರದ ಸ್ಥಾನಗಳನ್ನು ಯುಎಇ, ಅಮೆರಿಕ, ಹಾಂಗ್‌ಕಾಂಗ್, ಸ್ವಿಝರ್‌ಲೆಂಡ್ ಹಾಗೂ ನೆದರ್‌ಲ್ಯಾಂಡ್‌ಗಳು ಪಡೆದುಕೊಂಡಿವೆ.
ಬುರುಂಡಿ, ಲೈಬೀರಿಯ ಹಾಗೂ ಕಾಂಗೊ ಗಣತಂತ್ರ ರಾಷ್ಟ್ರಗಳು ವಿಶ್ವದ ಅತ್ಯಂತ ಬಡ ಮೂರು ರಾಷ್ಟ್ರಗಳಾಗಿ ಗುರುತಿಸಲಾಗಿದೆ.












Click it and Unblock the Notifications