ಕೊಲೆ ಕೇಸ್ :ಕಂಚಿ ಶ್ರೀಗಳ ಮೇಲೆ ತನಿಖೆಗೆ ಆದೇಶ

Kanchi seer Jayendra Saraswathi
ಚೆನ್ನೈ, ಫೆ.27: 2004ರ ಶಂಕರ್ ರಾಮನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಚಿ ಶಂಕರಮಠ ಸ್ವಾಮೀಜಿ ಜಯೇಂದ್ರ ಸರಸ್ವತಿ ಅವರ ವಿರುದ್ಧ ತನಿಖೆ ನಡೆಸುವಂತೆ ತಮಿಳುನಾಡು ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಸೋಮವಾರ(ಫೆ.27) ಆದೇಶ ನೀಡಿದೆ.

ನ್ಯಾ. ಪಾಲ್ ಎನ್ ವಸಂತ್ ಕುಮಾರ್ ಹಾಗೂ ಜಿಎಂ ಅಕ್ಬರ್ ಅಲಿ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಶಂಕರ್ ರಾಮನ್ ಹತ್ಯೆ ಪ್ರಕರಣದ ತೀರ್ಪಿನ ಹಿಂದೆ ಕಾಣದ ಕೈಗಳ ಕೈವಾಡವಿರುವ ಬಗ್ಗೆ ನ್ಯಾಯಪೀಠ ಶಂಕೆ ಹೊರಡಿಸಿದೆ.

ಅಡ್ವೋಕೇಟ್ ಪಿ ಸುಂದರರಾಜನ್ ಹಾಗೂ ಮಣಿಕಂದನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ತನಿಖೆ ನಡೆಸುವಂತೆ ಡಿಜಿಪಿ ಡಾ ಸುಧಾಕರ್ ಅವರಿಗೆ ಸೂಚಿಸಿತು.

ಸೈಬರ್ ಕ್ರೈಂ ವಿಭಾಗ ಅಥವಾ ಇತರೆ ವಿಭಾಗದ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿ ಮೂರು ತಿಂಗಳಿನಲ್ಲಿ ವರದಿ ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ.

ಕಂಚೀಪುರಂನ ವರದರಾಜಪೆರುಮಾಳ್ ದೇಗುಲದ ಮ್ಯಾನೇಜರ್ ಆಗಿದ್ದ ಶಂಕರ್ ರಾಮನ್ ಅವರನ್ನು ಸೆ.3,2004ರಲ್ಲಿ ಕಚೇರಿ ಆವರಣದಲ್ಲೇ ಕೊಲೆ ಮಾಡಲಾಗಿತ್ತು.

ಜಯೇಂದ್ರ ಹಾಗೂ ವಿಜಯೇಂದ್ರ ಸರಸ್ವತಿ ಅವರ ಮೇಲೆ ಐಪಿಸಿ ಸೆಕ್ಷನ್ 302 ಹಾಗೂ 120-ಬಿ ಅಡಿಯಲ್ಲಿ ಆರೋಪ ಹೊರೆಸಲಾಗಿತ್ತು. ಚೆಂಗಲ್ ಪಟ್ಟು ಕೋರ್ಟ್ ನಿಂದ ಪ್ರಕರಣ ಈಗ ಪುದುಚೇರಿಗೆ ವರ್ಗವಾಗಿದೆ. ಹೈಕೋರ್ಟ್ ಆದೇಶದಿಂದ ಪ್ರಕರಣಕ್ಕೆ ಮತ್ತೆ ಜೀವ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+