ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ ಲೀಟರಿಗೆ 4 ರು. ಏರಿಕೆ ಸಂಭವ

By Prasad
|
Google Oneindia Kannada News

Petrol to be costlier by Rs 4
ನವದೆಹಲಿ, ಫೆ. 27 : ತೈಲ ಕಂಪನಿಗಳು ಮತ್ತೊಮ್ಮೆ ದೇಶದ ಶ್ರೀಸಾಮಾನ್ಯರ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ 'ಬಾಂಬ್' ಎಸೆಯಲು ಸಿದ್ಧವಾಗಿವೆ. ಬಲ್ಲ ಮೂಲಗಳ ಪ್ರಕಾರ ಪೆಟ್ರೋಲ್ ಪ್ರತಿ ಲೀಟರಿಗೆ 4 ರು. ಮತ್ತು ಡೀಸೆಲ್ ಪ್ರತಿ ಲೀಟರಿಗೆ 2 ರು. ಏರಲಿವೆ.

ಕಳೆದ ಫೆ. 13ರಂದೇ ಪೆಟ್ರೋಲ್ ಬೆಲೆ ಲೀಟರಿಗೆ 3 ರು. ಏರಿಸುವುದಾಗಿ ಸೂಚನೆ ಕೊಟ್ಟಿದ್ದವು. ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗಳು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಸಲು ತುದಿಗಾಲಿನಲ್ಲಿ ನಿಂತಿದ್ದವು.

ಆದರೆ, ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆ ಇದ್ದಿದ್ದರಿಂದ ಕೇಂದ್ರ ಸರಕಾರ ಪೆಟ್ರೋಲ್ ಬೆಲೆ ಏರಿಕೆಗೆ ಸಹಮತ ವ್ಯಕ್ತಪಡಿಸಿದ್ದಿಲ್ಲ. ಚುನಾವಣೆ ಮುಗಿಯುವವರೆಗೆ ಏರಿಸದಂತೆ ತಾಕೀತು ಮಾಡಲಾಗಿತ್ತು. ಈಗ ಚುನಾವಣೆ ಪರ್ವ ಮುಗಿದಿದೆ. ಹಾಗಾಗಿ ತೈಲ ಬೆಲೆ ಏರುವುದು ನಿಚ್ಚಳವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರೂ ಎರಡು ತಿಂಗಳಿನಿಂದ ತೈಲೋತ್ಪನ್ನಗಳ ಬೆಲೆ ಏರಿಸಿಲ್ಲ. ಇದು ಹೀಗೆ ಬಹುದಿನ ನಡೆಯುವುದು ಸಾಧ್ಯವಿಲ್ಲ. ಬೆಲೆ ಏರಿಸದಿದ್ದರೆ ಕಂಪನಿಗಳು ಭಾರೀ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಐಓಸಿ ಚೇರ್ಮನ್ ಆರ್.ಎಸ್. ಬುಟೋಲಾ ಹೇಳಿದ್ದಾರೆ.

ಈ ಬೆಲೆ ಏರಿಕೆ ಯಾವಾಗಿನಿಂದ ಜಾರಿಗೆ ಬರುವುದು ಎಂಬುದು ಇನ್ನೂ ನಿಖರವಾಗಿಲ್ಲ. ಆದ್ದರಿಂದ, ಪೆಟ್ರೋಲ್ ಬಂಕುಗಳಲ್ಲಿ 'ನೋ ಸ್ಟಾಕ್' ಬೋರ್ಡ್ ತಗುಲಿ ಹಾಕದಿದ್ದರೆ, ಇಂದೇ ಬೈಕು, ಕಾರುಗಳನ್ನು ಪೆಟ್ರೋಲ್, ಡೀಸೆಲ್‌ನಿಂದ ಭರ್ತಿ ಮಾಡಿಕೊಳ್ಳುವುದು ಜಾಣತನ.

English summary
Dear common man get ready for petrol and diesel price hike. Petrol is getting costlier by Rs. 4 and Diesel by Rs. 2 per litre. Are you ready for it?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X