• search

ಯಡಿಯೂರಪ್ಪ ಮುಂದಿನ ಹೆಜ್ಜೆ ಗೋವಾದಲ್ಲಿ?

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  karnataka-bjp-crisis-bsy-to-give-a-shock-gadkari
  ಬೆಂಗಳೂರು, ಫೆ. 24: ಡಿವಿ ಸದಾನಂದಗೌಡರನ್ನು ಕಿತ್ತೊಗೆದು ತಮ್ಮನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ತಮ್ಮ ಅಗ್ರ-ಉಗ್ರ ಬೇಡಿಕೆಯನ್ನು ನಿತಿನ್ ಗಡ್ಕರಿ ನೇತೃತ್ವದ ಬಿಜೆಪಿ ಹೈಕಮಾಂಡ್ ತಿರಸ್ಕರಿಸಿರುವುದಕ್ಕೆ ಸಡ್ಡು ಹೊಡೆಯಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಸಿವೆ.

  ಯಡಿಯೂರಪ್ಪ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ ಎಂಬುದನ್ನು ಅರಿತ ಯಡಿಯೂರಪ್ಪ ಆಪ್ತರು ಇದೀಗ ಖಾಸಗಿ ರೆಸಾರ್ಟಿನಲ್ಲಿ ನಡೆಯುತ್ತಿರುವ ಚಿಂತನ ಮಂಥನ ಸಭೆಯಲ್ಲಿ ಸಪ್ಪೆ ಮೋರೆ ಹಾಕಿಕೊಂಡು ಕುಳಿತಿದ್ದಾರೆ. ಯಡ್ಡಿ ಬಣದ ಶಾಸಕರ ಮನದಲ್ಲಿ ಉದ್ವಿಗ್ನತೆ ಮೂಡಿದ್ದು, ಗಡ್ಕರಿ ಭಾಷಣ ಮುಗಿಯುತ್ತಿದ್ದಂತೆ ತಮ್ಮ ನಾಯಕ ನೀಡುವ ಸೂಚನೆಗಾಗಿ ಕಾದುಕುಳಿತಿದ್ದಾರೆ.

  ಬಹುಶಃ ಯಡಿಯೂರಪ್ಪ ಅವರು ಸಭೆಯನ್ನು ಬಹಿಷ್ಕರಿಸುವ ಸಾಧ್ಯತೆ ಇದೆ. ನಂತರ ತಮ್ಮ ಬೆಂಬಲಿಗ ಶಾಸಕರೊಂದಿಗೆ ಗೋವಾದಲ್ಲಿ ಕುಂಕಳ್ಳಿ ರೆಸಾರ್ಟಿಗೆ ತೆರಳಿ ಪ್ರತ್ಯೇಕ ಸಭೆ ನಡೆಸುವುದಕ್ಕೆ ನಿರ್ಧರಿಸಿದ್ದಾರೆ.

  ಯಡಿಯೂರಪ್ಪ, ಈ ಹಿಂದೆ ತಾವೇ ನೀಡಿದ್ದ ಫೆ. 27ರ ಡೆಡ್ ಲೈನ್ ವರೆಗೂ ಕಾಯುವ ಸಹನೆ ಕಳೆದುಕೊಂಡಿರುವಂತೆ ಕಾಣುತ್ತಿದೆ. ಇಂದೇ ರಾಜ್ಯ ನಾಯಕತ್ವ ವಿಷಯ ಫೈಸಲಾಗಬೇಕು ಎಂದು ಮತ್ತೆ ಹಠಕ್ಕೆ ಬಿದ್ದಿರುವಂತಿದೆ. ಇದನ್ನು ಸಾಧಿಸುವುದಕ್ಕಾಗಿ ಒತ್ತಡ ತಂತ್ರಕ್ಕೆ ಮೊರೆಹೋಗಿದ್ದು, ಗಡ್ಕರಿ ದಿಢೀರನೆ ದಿಲ್ಲಿ ವಿಮಾನ ಹತ್ತುವುದಕ್ಕೂ ಮೊದಲೇ ಅವರಿಗೆ ಆಘಾತಕಾರಿ ಸುದ್ದಿ ನೀಡುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Karnataka BJP crisis: The BJP High Command has made it clear that there is no change in leadership in Karnataka. As such DV Sadananda Gowda will continue as CM. But BSY is all set to give shock Gadkari before he embarks Delhi Plane a short while from now. (Feb 24 11.30 am)

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more