ಈ ಶೌಚಾಲಯ ಕ್ರಾಂತಿ ಎಲ್ಲೆಡೆ ಹಬ್ಬಲಿ

Toilet Revolution Betul
ಭೋಪಾಲ್, ಫೆ.24: ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆಯೊಬ್ಬರು ತನ್ನ ಪತಿ ಮನೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಈಗ ಶೌಚಾಲಯ ಕ್ರಾಂತಿ ಎಲ್ಲೆಡೆ ಹಬ್ಬುವಂತೆ ಮಾಡುವುದಾಗಿ ಸುಲಭ್ ಇಂಟರ್ ನ್ಯಾಷನಲ್ ಸಂಸ್ಥೆ ಘೋಷಿಸಿದೆ.

ಬೆಟುಲ್ ಜಿಲ್ಲೆಯ ಜೀತುಧಾನ ಗ್ರಾಮದ ಮಹಿಳೆ ಅನಿತಾ ನರ್ರೆ ತನ್ನ ಪತಿ ಮನೆಯಲ್ಲಿ ಶೌಚಾಲಯ ಇಲ್ಲದಿರುವುದನ್ನು ಕಂಡು ಹೌಹಾರಿದ್ದಳು. ನಂತರ ಶೌಚಾಲಯ ವ್ಯವಸ್ಥೆ ಕಲ್ಪಿಸುವ ತನಕ ಮನೆಗೆ ಕಾಲಿಡುವುದಿಲ್ಲ ಎಂದು ನೇರ ಮಾತುಗಳಲ್ಲಿ ಹೇಳಿ ಮನೆ ತೊರೆದಿದ್ದಳು.

ಮುಂದೆ ಅನಿತಾಳ ದಿಟ್ಟ ಕ್ರಮಕ್ಕೆ ಮೆಚ್ಚಿ ಅಕೆಗೆ ಪಂಚಾಯಿತಿಯಿಂದ 2 ಲಕ್ಷ ರು ಹಾಗೂ ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ 5 ಲಕ್ಷ ರು ಪ್ರೋತ್ಸಾಹ ನೀಡಲು ಸಂಘಟನೆಗಳು ಮುಂದೆ ಬಂದಿದೆ.

ಅನಿತಾಳಿಗೆ ಸುಲಭ್ ಸ್ಯಾನಿಟೇಷನ್ ಪ್ರಶಸ್ತಿ ನೀಡುವುದಾಗಿ ಎನ್ ಜಿಒ ಸುಲಭ್ ಇಂಟರ್ ನ್ಯಾಷನಲ್ ಘೋಷಿಸಿದೆ.

ಶೌಚಾಲಯದ ಮಹತ್ವದ ಬಗ್ಗೆ 24 ಭಾಷೆಗಳಲ್ಲಿ ಪುಸ್ತಕ ಹೊರತರಲಾಗುತ್ತಿದೆ. ಅನಿತಾಳ ಸಾಹಸಗಾಥೆ ಕೂಡಾ ಅದರಲ್ಲಿ ಸೇರಿಸಲಾಗುವುದು. ಪುಸ್ತಕದ ಐದು ಪ್ರತಿಗಳನ್ನು ದೇಶದ ಪ್ರತಿ ಪಂಚಾಯಿತಿಗಳಿಗೆ ಹಂಚಲಾಗುವುದು ಎಂದು ಸುಲಭ್ ಸಂಸ್ಥೆ ಮುಖ್ಯಸ್ಥ ಪಾಠಕ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+