• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಬಿನ್ ಶರ್ಮಾ ಮನೋಜ್ಞ ಉಪನ್ಯಾಸಕ್ಕೆ ಕಿವಿಯಾಗಿರಿ

By Prasad
|
ವಿಶ್ವದಾದ್ಯಂತ ಅತ್ಯಂತ ಯಶಸ್ವಿ ಉಪನ್ಯಾಸಗಳನ್ನು ನೀಡಿರುವ ಖ್ಯಾತ ಲೇಖಕ ರಾಬಿನ್ ಶರ್ಮಾ ಅವರು ಫೆ.29ರಂದು ಬೆಂಗಳೂರಿನಲ್ಲಿ ವಿಚಾರ ಸಂಕಿರಣದಲ್ಲಿ ಭಾಗವಹಿಸುತ್ತಿದ್ದಾರೆ. 'ಲೀಡ್ ವಿದೌಟ್ ಎ ಟೈಟಲ್' ಸೆಮಿನಾರ್ ಯಶವಂತಪುರದಲ್ಲಿರುವ ತಾಜಾ ವಿವಂತಾ ಹೋಟೆಲಿನಲ್ಲಿ ನಡೆಯಲಿದೆ. ಇದು 2012ರಲ್ಲಿ ರಾಬಿನ್ ಶರ್ಮಾ ಅವರು ಭಾರತದಲ್ಲಿ ನಡೆಸುತ್ತಿರುವ ಏಕೈಕ ಸಾರ್ವಜನಿಕ ಕಾರ್ಯಕ್ರಮ.

ಲೀಡರ್ಶಿಪ್ ತಜ್ಞ, 'ದಿ ಲೀಡರ್ ಹೂ ಹ್ಯಾಡ್ ನೋ ಟೈಟಲ್'ನಂಥ ನಂ.1 ಬೆಸ್ಟ್ ಸೆಲ್ಲರ್ ಪುಸ್ತಕವನ್ನು ಬರೆದ ಅಂತಾರಾಷ್ಟ್ರೀಯ ಖ್ಯಾತಿಯ ರಾಬಿನ್ ಶರ್ಮಾ ಅವರು, ಅತ್ಯಂತ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಶ್ವದ ಯಶಸ್ವಿ ಕಂಪನಿಗಳ ಯಶಸ್ವಿ ನಾಯಕರು ಯಶಸ್ಸನ್ನು ಕಂಡುಕೊಳ್ಳಲು ಬಳಸಲಾದ ತಂತ್ರಗಾರಿಕೆ, ಕೌಶಲ್ಯವನ್ನು ಈ ಸೆಮಿನಾರಿನಲ್ಲಿ ಭಾಗವಹಿಸುತ್ತಿರುವವರಿಗೆ, ಅತ್ಯಂತ ಸ್ಫೂರ್ತಿದಾಯಕವಾಗಿ ತಿಳಿಸಿಕೊಡಲಿದ್ದಾರೆ.

ರಾಬಿನ್ ಅವರ ಅಂತಾರಾಷ್ಟ್ರೀಯ ಬೆಸ್ಟ್ ಸೆಲ್ಲರ್ The Leader Who Had No Title (ಮುಕುಟವಿಲ್ಲದ ನಾಯಕ) ಮೇಲೆ ವಿಚಾರ ಸಂಕಿರಣ ನಡೆಯಲಿದೆ. ಅತ್ಯಂತ ಪ್ರೇರಣಾದಾಯಕವಾಗಿರುವ ಈ ಸೆಮಿನಾರಿನಲ್ಲಿ ಕಲಿಸಲಿರುವ ಸಂಗತಿಗಳು.

* ಮುಕುಟವಿಲ್ಲದ ನಾಯಕರ 7 ಅತ್ಯುತ್ತಮ ಪದ್ಧತಿಗಳು.
* ಅತ್ಯಂತ ಬಿಜಿ ವೇಳೆಯಲ್ಲೂ ಅತ್ಯುತ್ತಮ ಕೆಲಸ ನಿರ್ವಹಿಸಲು ಕಂಡುಕೊಂಡಿರುವ 8 ಕೌಶಲ್ಯಗಳು.
* ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಲು ಉನ್ನತ ಕಂಪನಿಗಳು ಉಪಯೋಗಿಸುವ ನಿಖರ ಕೌಶಲ್ಯಗಳು.
* ಗೆಲ್ಲಲು ಮತ್ತು ಫಲಪ್ರದಾಯಕವಾಗಿ ಕಾರ್ಯನಿರ್ವಹಿಸಲು ಬೇಕಾಗಿರುವ 4 ಅಂಶಗಳು.
* ಅನಿಶ್ಚಿತತೆ ಇದ್ದಾಗ ಮತ್ತು ಅಲ್ಲೋಲಕಲ್ಲೋಲವಾದಾಗ ಬಲಿಷ್ಠರಾಗಲು ಅವಶ್ಯವಿರುವ ವೈಯಕ್ತಿಕ ನಾಯಕತ್ವದ ಪಾಠಗಳು.

ನೀವು ಏನನ್ನು ಕಲಿಯಲಿದ್ದೀರಿ?

* ನಮ್ಮ ಸ್ಥಾನ ಏನೇ ಇದ್ದರೂ ಅತ್ಯಂತ ಪ್ರತಿಭಾವಂತರ ಮೇಲೆ ಪ್ರಭಾವ ಬೀರುವಂತೆ ಕೆಲಸ ಮಾಡುವುದು ಹೇಗೆ?
* ತೀವ್ರತರ ಬದಲಾವಣೆಯ ಸಂದರ್ಭ ಬಂದಾಗ ಅವಕಾಶವನ್ನು ಗುರುತಿಸುವ ಮತ್ತು ಅವಕಾಶವನ್ನು ಬಳಸಿಕೊಳ್ಳುವ ವಿಧಾನ.
* ಕುಬೇರರು ಮತ್ತು ಸಿಕ್ಕಾಪಟ್ಟೆ ಯಶಸ್ವಿ ವ್ಯಕ್ತಿಗಳು ತಮ್ಮ ಖಾಸಗಿ ಸಮಯವನ್ನು ಹೇಗೆ ಕಳಿಯುತ್ತಾರೆ.
* ಒಂದು ಅದ್ಭುತ ತಂಡವನ್ನು ಕಟ್ಟುವ ಮತ್ತು ಗ್ರಾಹಕರು 'ಭೇಷ್' ಅನ್ನುವಂತೆ ಮಾಡುವ ತಕ್ಷಣದ ತಂತ್ರಗಾರಿಕೆ.
* ನಮ್ಮ ಕ್ಷೇತ್ರದಲ್ಲಿ ಎಗ್ಗಿಲ್ಲದೆ ಮುನ್ನುಗ್ಗಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಿಷ್ಠರಾಗಲು ಅಳವಡಿಸಿಕೊಳ್ಳಬೇಕಾದ ಕೌಶಲ್ಯಗಳು.
* ಖಿನ್ನತೆಯನ್ನು ಒದ್ದೋಡಿಸಲು, ಮನೋಸ್ಥಿತಿಯನ್ನು ಗಟ್ಟಿಗೊಳಿಸಲು, ಚೈತನ್ಯದ ಚಿಲುಮೆಯಂತಿರಲು ಮತ್ತು ಖಾಸಗಿ ಜೀವನವನ್ನು ಯಶಸ್ವಿಯಾಗಿ ನಿಭಾಯಿಸಲು ಬೇಕಾದ ದಾರಿಗಳು.
* ಜವಾನಗಿರಿಯಿಂದ ನಾಯಕತ್ವಕ್ಕೆ ಪುಟಿದೇಳಲು ಬೇಕಾದ ಸಲಕರಣೆಗಳು.

ಈ ಕಾರ್ಯಕ್ರಮವನ್ನು ಸಂಸ್ಥೆಗಳ ಮುಂದಾಳುಗಳಿಗೆ, ವೃತ್ತಿಪರರಿಗೆ, ವಿದ್ಯಾರ್ಥಿಗಳಿಗೆ ಮತ್ತು ಖಾಸಗಿಯಾಗಲಿ ವೃತ್ತಿಯಲ್ಲಾಗಲಿ ನಾಯಕನಾಗಿ ಯಶಸ್ಸು ಕಾಣಲು ಹಂಬಲಿಸುವ ವ್ಯಕ್ತಿಗಳಿಗಾಗಿ ಆಯೋಜಿಸಲಾಗಿದೆ.

ಕೊನೆಯ ಕೆಲ ಟಿಕೆಟ್‌ಗಳು ಈ ತಾಣದಲ್ಲಿ ಲಭ್ಯವಿವೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ - ಅದಿತಿ : ಮೊ : 95915 27628, ಈಮೇಲ್ : aditi@rangde.org ಅಥವಾ ಸ್ಮಿತಾ : ಮೊ : 96861 14608, ಈಮೇಲ್ : smita@rangde.org.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
After a highly successful Speaking Tour across the world, Robin Sharma will be in Bangalore on 29th February for a seminar on Lead without A Title at Taj Vivanta Yeshwanthpur. The seminar is based on Robin Sharma's No.1 bestseller The Leader Who Had No Title.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more