ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಓಣಿಯ ರಸ್ತೆ ಹೇಗಿದೆ? ಚಿತ್ರಗಳನ್ನು ನಮಗೆ ಕಳಿಸಿ

By Prasad
|
Google Oneindia Kannada News

How is road condition in your area? Send pictures
ಬೆಂಗಳೂರು, ಫೆ. 21 : ನಿಮ್ಮ ಓಣಿ, ನೀವು ವಾಸಿಸುವ ಪ್ರದೇಶ, ದಿನನಿತ್ಯ ಓಡಾಡುವ ಜಾಗ, ಯಾವತ್ತೋ ಒಂದು ದಿನ ಹಾದುಹೋಗುವ ಬಡಾವಣೆಯಲ್ಲಿನ ರಸ್ತೆಗಳ ಸ್ಥಿತಿ ಹೇಗಿದೆ? ಈ ಪ್ರಶ್ನೆ ಬೆಂಗಳೂರಿನ ವಾಸಿಗರಿಗೆ ಮಾತ್ರವಲ್ಲ ಕರ್ನಾಟಕದ ಸಮಸ್ತ ಕನ್ನಡ ಇಂಟರ್ನೆಟ್ ಬಳಕೆದಾರ ಮುಂದಿಡುತ್ತಿದ್ದೇವೆ.

ವರ್ಷಗಳಿಂದ ಹಳ್ಳ ಹಿಡಿದಿರುವ ರಸ್ತೆ ಹಾಗೇ ಇದೆಯಾ? ನಮ್ಮ ಮೆಟ್ರೋ, ಕೆಳ ಸೇತುವೆ ಅಥವಾ ಮೇಲ್ಸೇತುವೆ ನಿರ್ಮಾಣದಿಂದಾಗಿ ರಸ್ತೆ ಹಾಳುಗೆಡವಲಾಗಿದೆಯಾ? ಚರಂಡಿ ದುರುಸ್ತಿಗೆಂದು ಅಗೆದ ಮೋರಿಯಲ್ಲಿನ ಹೊಲಸನ್ನೆಲ್ಲ ರಸ್ತೆ ತುಂಬ ಚೆಲ್ಲಾಡಲಾಗಿದೆಯಾ? ಕುಡಿಯುವ ನೀರು ತರುವ (?) ಪೈಪುಗಳನ್ನು ಹೂಳಲು ರಸ್ತೆ ಅಗೆಯಲಾಗಿದೆಯಾ? ಮಳೆಯಿಂದಾಗಿ ಹಾಳಾದ ರಸ್ತೆ ಇನ್ನೂ ನೀರಿಗೆ ಬೊಗಸೆ ಒಡ್ಡಿದೆಯಾ?

ಅಥವಾ ಯಾವ ಏರಿಯಾದಲ್ಲೂ ಇರದ ಸುಂದರ ರಸ್ತೆ ನಿಮ್ಮ ಬಡಾವಣೆಯಲ್ಲಿ ನಿರ್ಮಿಸಲಾಗಿರಬಹುದು. ಜನಪರ ಕಾಳಜಿ ಇರುವ ಕಾರ್ಪೊರೇಟರ್ ನಿಯಮಿತವಾಗಿ ರಸ್ತೆ ದುರುಸ್ತಿ ಮಾಡಿಸುತ್ತಿರಬಹುದು. ಕನಿಷ್ಠಪಕ್ಷ ತೆಗ್ದುದಿನ್ನೆಗಳನ್ನು ತ್ಯಾಪೆ ಹಚ್ಚಿ ಸಮತಟ್ಟು ಮಾಡಿರಬಹುದು. ಒಟ್ಟಿನಲ್ಲಿ ನಿಮ್ಮ ಏರಿಯಾದಲ್ಲಿನ ರಸ್ತೆಗಳು ಹೇಗಿವೆ? ಚುನಾವಣೆಯ ಸಮಯದಲ್ಲಿ ಮಾತ್ರ ನಿಮ್ಮ ಕೇರಿಗೆ ಬರುವ ಶಾಸಕರು ಎಂದಾದರೂ ನಿಮ್ಮ ಗಲ್ಲಿಗೆ ಬಂದು ರಸ್ತೆಯ ಸ್ಥಿತಿ ನೋಡಿದ್ದಾರಾ?

ನಾವು ನಿಮಗೆ ಕೇಳುವುದು ಇಷ್ಟೆ. ರಸ್ತೆ ಹಳ್ಳ ಹಿಡಿದಿರಲಿ ಅಥವಾ ಸುಂದರವಾಗಿರಲಿ ಅಂತಹ ಚಿತ್ರಗಳನ್ನು ನಮಗೆ ಕಳಿಸಿ. ಹಾಳಾಗಿ ಹೋಗಿದ್ದರೆ ಅವನ್ನು ನಮ್ಮ ತಾಣದಲ್ಲಿ ಪ್ರಕಟಿಸಿ, ಸಂಬಂಧಿತ ಅಧಿಕಾರಿಗಳ ಅಥವಾ ಕಾರ್ಪೊರೇಟರ್ ಗಮನಕ್ಕೆ ತರೋಣ. ನಮ್ಮ ನಗರದ ಅಥವಾ ಹಳ್ಳಿಯ ವಸ್ತುಸ್ಥಿತಿಯನ್ನು ಚಿತ್ರಗಳಲ್ಲಿ ಹಿಡಿದಿಡೋಣ. ಸಾವಿರ ಪದಗಳನ್ನು ಹೇಳದ್ದನ್ನು ಒಂದು ಚಿತ್ರ ಬಣ್ಣಿಸುತ್ತದೆ ಎಂಬುದು ಗಮನದಲ್ಲಿರಲಿ. ಚಿತ್ರ ಕಳಿಸುವ ಅಭಿಯಾನ ಇಂದೇ ಶುರುವಾಗಲಿ. ಬದಲಾವಣೆಯ ಹರಿಕಾರರು ನೀವಾಗಿರಿ.

ಗಮನಿಸಿ : ಚಿತ್ರ ಕಳಿಸುವಾಗ ನಿಮ್ಮ ಹೆಸರು, ಬಡಾವಣೆ, ರಸ್ತೆ (ಹೆಸರು ಇದ್ದರೆ), ಊರಿನ ವಿವರ ತಿಳಿಸಿ.

ಚಿತ್ರ ಕಳಿಸಬೇಕಾದ ವಿಳಾಸ : [email protected]

English summary
How is the road condition in your locality, in your city, district? Please send us the pictures of the roads, in any condition, constructed or destructed. We will publish them. Let's be proactive citizen. If we will, we can bring in the change.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X