ಟಿವಿ ಆಂಕರ್ ಗೆ ವರದಕ್ಷಿಣೆ ಕಿರುಕುಳ
ಹೈದರಾಬಾದ್,
ಫೆ 13: ಆಂಧ್ರದ ಖಾಸಗಿ ಟಿವಿ ಚಾನೆಲಿನ ನ್ಯೂಸ್ ರೀಡರ್ ತನ್ನ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ. ನಗರದ ಸಿಸಿಬಿ ಪೊಲೀಸರು ಕಳೆದ ವಾರ ಪ್ರಕರಣ ದಾಖಲಿಸಿದ್ದಾರೆ. id="toptextpromo">'ಇನ್ನೂ
ಹೆಚ್ಚು ವರದಕ್ಷಿಣೆ ತರುವಂತೆ ನನ್ನ ಪತಿ ನಾಗೇಂದರ್ ರೆಡ್ಡಿ ಪೀಡಿಸುತ್ತಿದ್ದಾನೆ. ವರದಕ್ಷಿಣೆ ಕೊಡಲಿಲ್ಲವೆಂದರೆ ಪರಿಣಾಮ ನೆಟ್ಟಗಿರುವುದಿಲ್ಲ. ತನ್ನ ಸ್ನೇಹಿತರೊಬ್ಬರು ಪೊಲೀಸ್ ಎಸಿಪಿ ಅಧಿಕಾರಿಯಾಗಿದ್ದಾರೆ' ಎಂದು ಆತ ಬೆದರಿಸುತ್ತಿರುವುದಾಗಿ ಟಿವಿ ಆಂಕರ್ ಮೇಘನಾ ರೆಡ್ಡಿ ತನ್ನ ಪತಿಯ ವಿರುದ್ಧ ದೂರು ನೀಡಿರುವುದಾಗಿ ಪೊಲೀಸ್ ಉಪ ಆಯುಕ್ತ ಜೆ. ಸತ್ಯನಾರಾಯಣ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನನ್ನ
ಗಂಡನ ಸ್ನೇಹಿತರಾದ ಪೊಲೀಸ್ ಎಸಿಪಿ ಆದೇಶದ ಮೇರೆಗೆ ಮಾಲಕಪೇಟೆ ಪೊಲೀಸರು ನನ್ನ ಸೋದರ ಸಾಯಿನಾಥನ ಮನೆಗೆ ತೆರಳಿ, ಅವನನ್ನು ಬಂಧಿಸಿದ್ದಾರೆ. ವರದಕ್ಷಿಣೆ ಕಿರುಕುಳ ದೂರು ವಾಪಸ್ ಪಡೆಯದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿಯೂ ಎಸಿಪಿ ಬೆದರಿಸುತ್ತಿರುವುದಾಗಿ ಮೇಘನಾ ದೂರಿನಲ್ಲಿ ಅಲವತ್ತುಕೊಂಡಿದ್ದಾರೆ. ಈ ಮಧ್ಯೆ, ಸಾಮಾಜ ಸೇವಾ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದಾಗ ಸಾಯಿನಾಥನನ್ನು ಬಿಟ್ಟುಕಳಿಸಿರುವುದಾಗಿ ಮೂಲಗಳು ತಿಳಿಸಿವೆ.











Click it and Unblock the Notifications