3 ಗಂಟೆಯಲ್ಲೇ ಹಾಸನ ಬೆಂಗಳೂರು ಪ್ರಯಾಣ ಸಾಧ್ಯ?

Bangalore- Hassan Road
ಬೆಂಗಳೂರು, ಫೆ.20: ಇನ್ಮುಂದೆ ಬೆಂಗಳೂರಿನಿಂದ ಹಾಸನಕ್ಕೆ ಕೇವಲ ಮೂರು ತಾಸಿನಲ್ಲಿ ಪ್ರಯಾಣಿಸಬಹುದಾಗಿದೆ. ಎರಡೂ ನಗರಗಳ ನಡುವಿನ ಪ್ರಯಾಣಕ್ಕೆ ಬೇಕಾಗುವ ನಾಲ್ಕೂವರೆಯಿಂದ ಐದು ತಾಸು ಸಮಯವನ್ನು ಮೂರು ಗಂಟೆಗೂ ಕಡಿಮೆ ಅವಧಿಗೆ ಇಳಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 48 ಚತುರ್ ಪಥ ರಸ್ತೆಯಾಗಿ ರೂಪುಗೊಂಡಿದೆ. NH 48ರ ಸುಮಾರು 185 ಕಿ.ಮೀ ರಸ್ತೆ ಈ ಯೋಜನೆಗೆ ಒಳಪಟ್ಟಿದೆ.

ನೆಲಮಂಗಲದಿಂದ ದೇವಿಹಳ್ಳಿ ತನಕ (81.8 ಕಿ.ಮೀ) ಹಾಗೂ ದೇವಿಹಳ್ಳಿ(ಬೆಳ್ಳೂರು ಕ್ರಾಸ್)ಯಿಂದ ಹಾಸನ ತನಕ(77 ಕಿ.ಮೀ) ರಸ್ತೆ ಸುಧಾರಣೆ ಕಾಮಗಾರಿ ಪೂರ್ಣಗೊಂಡಿದೆ.

ಬಯಲು ಸೀಮೆಯಿಂದ ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಚತುರ್ಪಥ ಯೋಜನೆ ಅಲ್ಲದೆ ಅಪಘಾತ ವಲಯಗಳಲ್ಲಿ ರಸ್ತೆ ನವೀಕರಣಗೊಳಿಸಲಾಗಿದೆ.

ಪ್ರಮುಖ ಅಪಘಾತ ವಲಯಗಳಾದ ಸೋಲೂರು, ಕುಣಿಗಲ್, ಯಡಿಯೂರು ಹಾಗೂ ಚನ್ನರಾಯಪಟ್ಟಣಗಳಲ್ಲಿ ತಿರುವು ರಸ್ತೆಗಳನ್ನು ನೇರಗೊಳಿಸಲಾಗಿದೆ ಎಂದು NHAI ಯೋಜನಾ ನಿರ್ದೇಶಕ ಆರ್ ಕೆ ಗುಪ್ತ ಹೇಳಿದ್ದಾರೆ.

ಮೊದಲ ಹಂತಕ್ಕೆ 441 ಕೋಟಿ ರು ತಗುಲಿದ್ದು ಲ್ಯಾಂಕೋ ಸಂಸ್ಥೆ ಕಾಮಗಾರಿ ಪೂರೈಸಿದೆ. 453 ಕೋಟಿ ರು ವೆಚ್ಚದ ಎರಡನೇ ಹಂತವನ್ನು ಎಲ್ ಅಂಡ್ ಟಿ ಕಂಪನಿ ಪೂರೈಸುವ ಹಂತದಲ್ಲಿದೆ. ಮುಂದಿನ ಜೂನ್ ವೇಳೆಗೆ ಹಾಸನ ಬೆಂಗಳೂರು ಮಾರ್ಗ ಸರಾಗ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಗುಪ್ತ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+