ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮೋಕಿಂಗ್: ಚೀನಾ ಯುವಜನತೆ ವಿಶ್ವಕ್ಕೇ 'ಕಿಂಗ್'

By Srinath
|
Google Oneindia Kannada News

china-300-million-smokers-highest-in-world
ಬೀಜಿಂಗ್, ಫೆ.19: ಈ ವರ್ಷವೂ ಚೀನಾದಲ್ಲಿ 'ಕಿಂಗ್' ದರ್ಬಾರು ಜೋರಾಗಿದೆ. ಅದೇ ಸ್ವಾಮಿ ಸ್ಮೋಕಿಂಗ್ ಜೀವಿಗಳದ್ದು. ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವ ಚೀನಾದಲ್ಲಿ ಸ್ಮೋಕಿಂಗ್ ಜನಸಂಖ್ಯೆಯೂ ಅತ್ಯಧಿಕವಾಗಿದೆ. ಈ ಸಂಖ್ಯೆ 30 ಕೋಟಿ ದಾಟಿದೆ. ಇದರಿಂದಾಗಿ, ವಿಶ್ವದಲ್ಲೇ ಅತಿ ಹೆಚ್ಚು ಧೂಮಪಾನಿಗಳನ್ನು ಹೊಂದಿರುವ ರಾಷ್ಟ್ರ ಎಂಬ ಅಪಖ್ಯಾತಿಗೆ ಚೀನಾ ಪಾತ್ರವಾಗಿದೆ. ಹದಿಹರೆಯದವರು ಸ್ಮೋಕಿಂಗ್ ಗಳಾಗುತ್ತಿರುವುದೇ ಈ ಗಣನೀಯ ಪ್ರಮಾಣದ ಏರಿಕೆಗೆ ಕಾರಣವಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ವಿಶ್ವದ ಅತೀ ದೊಡ್ಡ ತಂಬಾಕು ಉತ್ಪಾದಕ ಮತ್ತು ಬಳಕೆದಾರ ರಾಷ್ಟ್ರವಾಗಿರುವ ಚೀನಾದಲ್ಲಿ 30 ಕೋಟಿ ಜನರು ಧೂಮಪಾನ ಮಾಡುತ್ತಾರೆ. ಇತರೆ ಸುಮಾರು 74 ಕೋಟಿ ಜನರು ಪ್ಯಾಸೀವ್ ಧೂಮಪಾನದ (ಸ್ವತಃ ಧೂಮಪಾನ ಮಾಡದೆ ಇತರರು ಬಿಟ್ಟ ಹೊಗೆಯನ್ನು ಸೇವಿಸುವ ಸ್ಥಿತಿ) ಪ್ರಭಾವಕ್ಕೆ ಒಳಗಾಗಿದ್ದಾರೆ' ಎಂದು ಚೀನಾದ ಆರೋಗ್ಯ ಇಲಾಖೆಯ ಉಪ ಸಚಿವ ಹುಯಾಂಗ್ ಜೇಫು ಶನಿವಾರ ಹೇಳಿದ್ದಾರೆ.

ಚೀನಾದಲ್ಲಿ ಪ್ರತಿವರ್ಷ 12 ಲಕ್ಷ ಜನರು ತಂಬಾಕು ಸಂಬಂಧಿ ರೋಗಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಚೀನಾದಲ್ಲಿ ಭಾರಿ ಸಂಖ್ಯೆಯಲ್ಲಿ ಧೂಮಪಾನಿಗಳಿರುವುದನ್ನು ಪರಿಗಣಿಸಿ ವಿಶ್ವ ಆರೋಗ್ಯ ಸಂಸ್ಥೆ ಕಳೆದ ವರ್ಷ ಎಚ್ಚರಿಕೆ ನೀಡಿತ್ತು. ತಂಬಾಕು ಬಳಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೇ ಹೋದಲ್ಲಿ ರೋಗಗಳಿಗೆ ತುತ್ತಾಗಿ ಮರಣ ಹೊಂದುವವರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಅದು ಹೇಳಿತ್ತು.

English summary
China has over 300 million smokers, the highest in the world, with the rate of teenage smokers increasing each year. As the world's largest tobacco-producing and consuming country, China has 300 million smokers and 740 million victims of passive smoking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X