ಬ್ರಿಟನ್ನಿನಲ್ಲಿ ಭಾನುವಾರವೂ ಉದಯಿಸಲಿರುವ 'ಸನ್'

ಸೋಮವಾರ ದಿಂದ ಶನಿವಾರ ತನಕ ಪ್ರಕಟವಾಗುವ ಪತ್ರಿಕೆ 'ಸನ್" ಪ್ರಥಮ ಪುಟದಲ್ಲೇ ಈ ರೀತಿಯ ಸೂಚನೆ ನೀಡಿದೆ: 'ಶೀಘ್ರದಲ್ಲೇ ಬರಲಿದೆ: 'ದಿ ಸನ್" ಪ್ರತಿ ರವಿವಾರ". ಲಂಡನ್‌ನಲ್ಲಿರುವ ತನ್ನ ಹಗರಣ ಪೀಡಿತ ಟ್ಯಾಬ್ಲಾಯಿಡ್‌ನ ಕಚೇರಿಗಳಿಗೆ ಭೇಟಿ ನೀಡಿದ ಮರ್ಡೋಕ್ ಈ ಘೋಷಣೆ ಮಾಡಿದ್ದಾರೆ.
ಫೋನ್ ಕದ್ದಾಲಿಕೆ ಹಗರಣದ ಹಿನ್ನೆಲೆಯಲ್ಲಿ ಕಳೆದ ಜುಲೈ ತಿಂಗಳಲ್ಲಿ ಮರ್ಡೋಕ್ ತನ್ನ ರವಿವಾರದ ಟ್ಯಾಬ್ಲಾಯಿಡ್ 'ನ್ಯೂಸ್ ಆಫ್ ದಿ ವರ್ಲ್ಡ್"ಅನ್ನು ಮುಚ್ಚಿದ್ದರು.
ಪತ್ರಿಕೆಯ ವಿರುದ್ಧ ಮೂರು ತನಿಖೆಗೆ ಆದೇಶಿಸಲಾಗಿತ್ತು ಹಾಗೂ ಬ್ರಿಟಿಶ್ ಪತ್ರಿಕೆಗಳ ದರ್ಜೆಯ ಬಗ್ಗೆ ತನಿಖೆಗೆ ಸರಕಾರ ಆದೇಶ ನೀಡಿತ್ತು. ಆದರೆ, ಬಂಧಿತ ಹತ್ತು ಸನ್ ಪತ್ರಕರ್ತರ ಮೇಲಿನ ಅಮಾನತನ್ನು ಹಿಂದಕ್ಕೆ ಪಡೆಯಲಾಗುವುದು ಹಾಗೂ ಟ್ಯಾಬ್ಲಾಯಿಡ್‌ನ ರವಿವಾರದ ಆವೃತ್ತಿಯನ್ನು ಪ್ರಕಟಿಸಲಾಗುವುದು ಎಂದು ಅಮೆರಿಕದಲ್ಲಿ ನೆಲೆ ಹೊಂದಿರುವ ನ್ಯೂಸ್ ಕಾರ್ಪ್‌ನ 80 ವರ್ಷ ಪ್ರಾಯದ ಸ್ಥಾಪಕ ಮುರ್ಡೋಕ್ ಪ್ರಕಟಿಸಿದ್ದಾರೆ.












Click it and Unblock the Notifications