ಮತ್ತೆ ನೆಲಕಚ್ಚಿದ ಕಿಂಗ್ ಫಿಷರ್, ಪ್ರಯಾಣಿಕರ ಪರದಾಟ

Kingfisher Airlines Operation
ಕೋಲ್ಕತ್ತಾ, ಫೆ.19: ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ವಿಮಾನಗಳು ಮತ್ತೆ ನೆಲಕಚ್ಚಿ ನಿಂತಿದೆ. ದಿನಕ್ಕೆ ಕನಿಷ್ಠ 50ಕ್ಕೂ ಅಧಿಕ ವಿಮಾನಗಳ ಹಾರಾಟ ಕ್ಯಾನ್ಸಲ್ ಮಾಡುತ್ತಿದ್ದ ಕಿಂಗ್ ಫಿಷರ್, ಈಗ ನಾಲ್ಕು ದಿನಗಳ ಮಟ್ಟಿಗೆ ತನ್ನ ವಿಮಾನಯಾನ ಸ್ಥಗಿತಗೊಳಿಸಿದೆ.

ಸಂಬಳ ಸಿಗದೆ ಪರದಾಡುತ್ತಿರುವ ಕೋಲ್ಕತ್ತಾದ ಪೈಲಟ್ ಗಳು ಮುಷ್ಕರ ಹೂಡಿರುವ ಹಿನ್ನೆಲೆಯಲ್ಲಿ ಹಲವು ಕಡೆ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸುಮಾರು 32 ವಿಮಾನಗಳು ದಿಢೀರ್ ಆಗಿ ರದ್ದಾದ ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿದೆ.

ಎರಡನೇ ಹಾಗೂ ಮೂರನೇ ಸ್ತರದ ನಗರಗಳಾದ ಲಖ್ನೋ, ಭುವನೇಶ್ವರ, ಪಾಟ್ನ, ಶ್ರೀನಗರ ಹಾಗೂ ಹೈದರಾಬಾದ್ ಗಳಲ್ಲಿ ವಿಮಾನಯಾನ ಸ್ಥಗಿತಗೊಂಡಿದೆ. ಪ್ರತಿದಿನ 240 ವಿಮಾನಗಳ ಬದಲು 160 ವಿಮಾನಯಾನಕ್ಕೆ ಕಿಂಗ್ ಫಿಷರ್ ಕುಸಿದಿದೆ.

ಇದಲ್ಲದೆ ಸಿಂಗಪುರ, ಬ್ಯಾಂಕಾಕ್, ಬೆಂಗಳೂರು, ವಿಜಯವಾಡ ಹಾಗೂ ಚೆನ್ನೈ ವಿಮಾನಗಳು ರದ್ದಾಗಿದೆ. ದೆಹಲಿ- ಬೆಂಗಳೂರು ವಿಮಾನ ಬುಕ್ಕಿಂಗ್ ಸೇವೆ ಸ್ಥಗಿತಗೊಳಿಸಲಾಗಿದೆ.

'ಸುಮಾರು 100 ಕೋಟಿ ರು ಎಸ್ ಬಿಐ ಗೆ ಪಾವತಿಸಿದ್ದೇವೆ. ಬ್ಯಾಂಕ್ ಸಾಲದ ಸಮಸ್ಯೆ ಎದುರಿಸುತ್ತಿರುವ್ವುದು ನಿಜ. ಆದರೆ, ನಾಲ್ಕು ದಿನಗಳಲ್ಲಿ ವಿಮಾನ ಸಂಚಾರ ಮತ್ತೆ ಮೊದಲಿನ ಸ್ಥಿತಿಗೆ ಬರಲಿದೆ' ಎಂದು ಸಿಇಒ ಸಂಜಯ್ ಅಗರವಾಲ್ ಹೇಳಿದ್ದಾರೆ.

ಆದರೆ, ಸುಮಾರು 7000 ಕೋಟಿ ರು ಸಾಲ ಹೊಂದಿರುವ ವಿಜಯ್ ಮಲ್ಯ ಒಡೆತನ ಕಿಂಗ್ ಫಿಷರ್ ಸಂಸ್ಥೆಯ ಆರ್ಥಿಕ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವಂತಿಲ್ಲ. ಮೂಲಗಳ ಪ್ರಕಾರ ಮಾರ್ಚ್ ೨೮ರವರೆಗೂ ವಿಮಾನಯಾನ ಸ್ಥಗಿತಗೊಳ್ಳುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+