ಕೊತ್ವಾಲ್ ರಾಮಚಂದ್ರನ ಕೈಕಾಲು ಒತ್ತುತ್ತಿದ್ದ ಡಿಕೆಶಿ

ಡಿಕೆಶಿ ಜನ್ಮ ಜಾಲಡಿಸಬಲ್ಲೆ. ಅವರು ಏನಾಗಿದ್ದರು, ಏನೇನಾಗಿದೆ, ಹೇಗೆ ದುಡ್ಡು ಸಂಪಾದಿಸಿದ್ದಾರೆನ್ನುವ ಸಂಪೂರ್ಣ ವಿಷಯ ನನಗೆ ತಿಳಿದಿದೆ. ಭೂಗತ ರೌಡಿಗಳ ಚೇಲಾ ಆಗಿ ಕಾಫಿ ಟೀ ಸಪ್ಲೈ ಮಾಡುತ್ತಿದ್ದ ಶಿವಕುಮಾರ್ ಗೆ ಹಣದ ಮದ ತಲೆಗೆ ಹತ್ತಿದೆ ಎಂದು ಯೋಗೇಶ್ವರ್ ಹರಿಹಾಯ್ದಿದ್ದಾರೆ.
ಡಿಕೆಶಿ ಅಂಥವರು ಮೂರು ನಾಲ್ಕು ಜನ ಏನಾದರು ಇದ್ದು ಬಿಟ್ಟರೆ ನಮ್ಮ ರಾಜ್ಯದ ಅರಣ್ಯ ಸಂಪತ್ತಿನ ಕತೆ ಅಷ್ಟೇ, ಮುಗಿದಂತೆ. ಕನಕಪುರ ಕ್ಷೇತ್ರವನ್ನು ದತ್ತಿಗೆ ತೆಗೆದುಕೊಂಡಂತೆ ಅವರ ದುಂಡಾವರ್ತನೆ ನಡೆದಿದೆ. ಇವರಿಗೆ ಸಾಮಾಜಿಕ ಜವಾಬ್ದಾರಿ ಎನ್ನುವುದು ಇಲ್ಲ ಎಂದು ಯೋಗೇಶ್ವರ್ ಆರೋಪಿಸಿದ್ದಾರೆ.
ನಾನು ಏನೇ ತಪ್ಪು ಮಾಡಿದರು ಅದಕ್ಕೆ ತಲೆಬಾಗಲು ಸಿದ್ದ. ರಾಜ್ಯದ ಕಾನೂನು ತನಗೆ ಅನ್ವಿಯಿಸುವುದಿಲ್ಲ ಎಂಬಂತಿರುವ ಶಿವಕುಮಾರ್ ಅವರದ್ದು ಅಹಂಕಾರದ ಪರಮಾವಧಿ ಎಂದು ಸಿ ಪಿ ಯೋಗೇಶ್ವರ್ ಮಾಧ್ಯಮದವರೊಂದಿಗೆ ಬೇಸರ ಹಂಚಿಕೊಂಡಿದ್ದಾರೆ.












Click it and Unblock the Notifications