ವಿಎಸ್ ಆಚಾರ್ಯ ನಿಧನಕ್ಕೆ ಹೃದಯಘಾತ ಕಾರಣವಲ್ಲ
ಬೆಂಗಳೂರು,
ಫೆ.16: ಮಂಗಳವಾರ ಮಧ್ಯಾಹ್ನ ಹಠಾತ್ ಸಾವಿಗೀಡಾದ ವೇದವ್ಯಾಸ ಶ್ರೀನಿವಾಸ ಆಚಾರ್ಯ ಅವರು ಹೃದಯಾಘಾತದಿಂದ ನಿಧನ ಹೊಂದಿರಲಿಕ್ಕಿಲ್ಲ. ಅವರ ಸಾವಿಗೆ 'ಲೊ ಶುಗರ್' ಕಾರಣ ಇರಬಹುದು ಎಂದು ಮಾಜಿ ಸಚಿವ ಮತ್ತು ಆಚಾರ್ಯ ಅವರ ಸಮಕಾಲೀನ, ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡ ಅನುಮಾನ ವ್ಯಕ್ತಪಡಿಸಿದ್ದಾರೆ. ವಿ.ಎಸ್. ಆಚಾರ್ಯ ಅವರು ನಗರದಲ್ಲಿ ಮಂಗಳವಾರ ನಡೆದ ಸಮಾರಂಭವೊಂದರ ವೇಳೆ ಕುಸಿದು ಬಿದ್ದು, ಸಾವನ್ನಪ್ಪಿದ್ದರು. ಅವರ ನಿಧನಕ್ಕೆ ಹೃದಯಾಘಾತ ಕಾರಣ ಎಂದು ಹೇಳಲಾಗಿತ್ತು. id="toptextpromo">ನಗರದ
ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ರಾಮಚಂದ್ರೇಗೌಡರು, ಆಚಾರ್ಯ ಅವರು ಮಂಗಳವಾರ ಬೆಳಗ್ಗೆಯೇ ಉಡುಪಿಯಿಂದ- ಬೆಂಗಳೂರಿಗೆ ಹೊರಟಿದ್ದಾರೆ. ವಿಮಾನ ಬೆಳಗ್ಗೆಯೇ ಇದ್ದುದರಿಂದ ಮನೆಯಲ್ಲಿ ಉಪಹಾರ ಮಾಡಿಲ್ಲ. ವಿಮಾನದಲ್ಲೂ ಅವರಿಗೆ ಉಪಹಾರ ನೀಡಿಲ್ಲ. ಇದರ ಪರಿಣಾಮವಾಗಿ ಅವರು ತೀವ್ರವಾಗಿ ದಣಿದಿದ್ದು, ಲೊ ಶುಗರ್‌ನಿಂದ ಅವರ ಸಾವು ಉಂಟಾಗಿರಬಹುದು ಎಂದು ರಾಮಚಂದ್ರಗೌಡ ಅನುಮಾನ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'>ಆಚಾರ್ಯ
ಅವರಿಗೆ ಲೊ ಶುಗರ್ ಆದಾಗಲೆಲ್ಲ ನಾನು ಅವರಿಗೆ ಚಾಕೋಲೆಟ್ ನೀಡುತ್ತಿದೆ ಎಂದೂ ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.











Click it and Unblock the Notifications