Get Updates
Get notified of breaking news, exclusive insights, and must-see stories!

ದಂಡ ಕಟ್ಟಲು ಭಿಕ್ಷೆ ಎತ್ತಿದ ಕನ್ನಡಪರ ಹೋರಾಟಗಾರರು

Cauvery dispute
ಮೈಸೂರು, ಫೆ 16: ಕಾವೇರಿ ನ್ಯಾಯಾಧೀಕರಣ ನೀಡಿದ್ದ ತೀರ್ಪನ್ನು ವಿರೋಧಿಸಿ ರೈಲು ತಡೆ ಚಳುವಳಿ ನಡೆಸಿ ಬಂಧನ ಶಿಕ್ಷೆ ಅನುಭವಿಸುತ್ತಿರುವ ಕನ್ನಡಪರ ಹೋರಾಟಗಾರರು ಭಿಕ್ಷೆ ಎತ್ತುವ ಮೂಲಕ ಹೊಸ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಈ ಹೋರಾಟಗಾರರಿಗೆ 21 ದಿನಗಳ ನ್ಯಾಯಾಂಗ ಬಂಧನ ಅಥವಾ 1200 ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಈ ಆದೇಶ ವಿರೋಧಿಸಿ ಕರ್ನಾಟಕ ಕಾವಲು ಪಡೆ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಭಿಕ್ಷೆ ಬೇಡಿ ಹಣ ಸಂಗ್ರಹಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಫೆಬ್ರವರಿ 6, 2007 ರಂದು ಕರ್ನಾಟಕದ ವಿರುದ್ದ ಕಾವೇರಿ ಪ್ರಾಧಿಕಾರ ತೀರ್ಪು ನೀಡಿದ್ದನು ಖಂಡಿಸಿ ಕನ್ನಡಪರ ಸಂಘಟನೆಗಳು ರೈಲು ತಡೆದು ಪ್ರತಿಭಟನೆ ನಡೆಸಿದ್ದವು. ಈ ಸಂಬಂಧ ರೈಲ್ವೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಏಳು ಮಂದಿ ಹೋರಾಟಗಾರರಿಗೆ 21 ದಿನ ನ್ಯಾಯಾಂಗ ಬಂಧನ ಅಥವಾ 1200 ದಂಡ ನೀಡುವಂತೆ ತೀರ್ಪು ನೀಡಿದ್ದರು. ಈ ತೀರ್ಪನ್ನು ವಿರೋಧಿಸಿ ಕರ್ನಾಟಕ ಕಾವಲು ಪಡೆ ಹಾಗೂ ಕನ್ನಡ ವೇದಿಕೆ, ಕಬಿನಿ ಹೋರಾಟ ಹಿತರಕ್ಷಣಾ ಸಮಿತಿ ಸೇರಿದಂತೆ ನೂರಾರು ಕಾರ್ಯಕರ್ತರು ಬುಧವಾರ (ಫೆ 15) ಪ್ರತಿಭಟನೆ ನಡೆಸಿದರು.

ನ್ಯಾಯಾಲಯವು ಏಳು ಮಂದಿಗೆ ವಿಧಿಸಿರುವ 8400 ರೂ. ದಂಡದಲ್ಲಿ 4500 ರೂ.ಗಳನ್ನು ಸಾರ್ವಜನಿಕರಿಂದ ಭಿಕ್ಷೆ ಮೂಲಕ ಹಣವನ್ನು ಸಂಗ್ರಹಿಸಿದರು. ಉಳಿದ ಹಣವನ್ನು ಕಾರ್ಯಕರ್ತರಿಂದ ಸಂಗ್ರಹಿಸಿ ದಂಡ ಪಾವತಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+