ವೈಎಸ್ ಆರ್ ಪತ್ನಿಗೆ ಭಾರಿ ಹೊಡೆತ, ನಾಯ್ಡುಗೆ ಸಂತಸ

YS Vijayamma
ಹೈದರಾಬಾದ್, ಡಿ.14: ಚಂದ್ರಬಾಬು ನಾಯ್ಡು ನೆಲಕಚ್ಚುವಂತೆ ಮಾಡುವ ತನಕ ಸುಮ್ಮನಿರುವುದಿಲ್ಲ ಎಂದು ಪಣ ತೊಟ್ಟಿರುವ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಪತ್ನಿ, ಶಾಸಕಿ ವೈಎಸ್ ವಿಜಯಮ್ಮ ಅವರಿಗೆ ಭಾರಿ ಹಿನ್ನೆಡೆ ಉಂಟಾಗಿದೆ.

ಆಕ್ರಮ ಆಸ್ತಿ ಗಳಿಕೆ ಸಂಬಂಧಿಸಿಂತೆ ನಾಯ್ಡು ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಿಜಯಮ್ಮ ಅವರು ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಕೇಂದ್ರ ತನಿಖಾ ತಂಡಕ್ಕೆ ವಹಿಸುವಂತೆ ಮನವಿ ಸಲ್ಲಿಸಿದ್ದರು.

ಆದರೆ, ಗುರುವಾರ ಈ ಅರ್ಜಿ ಕೈಗೆತ್ತಿಕೊಂಡ ಆಂಧ್ರಪ್ರದೇಶ ಹೈಕೋರ್ಟ್, ವಿಜಯಮ್ಮ ಅವರ ಅರ್ಜಿಯನ್ನು ತಿರಸ್ಕರಿಸಿದೆ. ನ್ಯಾ. ಜಿ ರೋಹಿಣಿ ಮತ್ತು ನ್ಯಾ. ಆಶುತೋಷ್ ಮಹಾಂತೋ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.

ವೈಎಸ್ ವಿಜಯಮ್ಮ ಅವರು ಸಲ್ಲಿಸಿದ ಮನವಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ನಿಯಮಾವಳಿಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ.

ರಾಜಕೀಯ ದ್ವೇಷ ಹಾಗೂ ಪ್ರತಿದಾಳಿಯ ತಂತ್ರದಲ್ಲಿರುವ ಈ ಮನವಿಯನ್ನು ಕೋರ್ಟ್ ಪುರಸ್ಕರಿಸಲು ಸಾಧ್ಯವಿಲ್ಲ. ಕೋರ್ಟ್ ಸಮಯವನ್ನು ಹಾಳು ಮಾಡುವ ಈ ರೀತಿ ಮನವಿಗಳನ್ನು ಸಲ್ಲಿಸದಂತೆ ದೂರುದಾರರಿಗೆ ಎಚ್ಚರಿಕೆ ನೀಡಲಾಯಿತು.

ಚಂದ್ರಬಾಬು ನಾಯ್ಡು ಅವರ ಜೊತೆ ಸುಜನಾ ಚೌಧರಿ, ಎನ್ ನಾಗೇಶ್ವರ ರಾವ್ ಹಾಗೂ ರಾಮೋಜಿ ರಾವ್ ಅವರನ್ನು ಸಹ ಆರೋಪಿಗಳು ಎಂದು ಹೆಸರಿಸಲಾಗಿತ್ತು. ಆದರೆ, ಪ್ರಕರಣದ ಸಿಬಿಐ ತನಿಖೆಗೆ ಇನ್ನೊಂದು ಪೀಠ ಈಗಾಗಲೇ ತಡೆಯಾಜ್ಞೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+