444 ಕೋಟಿ ನಷ್ಟ:ಕಿಂಗ್ ಫಿಷರ್ ಮೇಲೇಳುವ ಲಕ್ಷಣವಿಲ್ಲ
ಬೆಂಗಳೂರು,
ಫೆ.16: ಕಿಂಗ್ ಫಿಷರ್ ಏರ್ ಲೈನ್ಸ್ ಕಂಪನಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವುದು ಈಗ ಅಧಿಕೃತವಾಗಿ ಬಹಿರಂಗವಾಗಿದೆ. 'ತೀವ್ರ ಆರ್ಥಿಕ ಹಿಂಜರಿತದಿಂದಾಗಿ' ತನ್ನ ತ್ರೈಮಾಸಿಕ ಆರ್ಥಿಕ ಸಂಕಷ್ಟದ ಹಣಕಾಸು ವರದಿಯನ್ನು ಬಹಿರಂಗಗೊಳಿಸಲು ಹಿಂಜರಿದಿದ್ದ ಕಂಪನಿ 2 ದಿನ ತಡವಾಗಿ ಫಲಿತಾಂಶ ಪ್ರಕಟಸಿದ್ದು, 444 ಕೋಟಿ ರುಪಾಯಿ ನಷ್ಟ ಅನುಭವಿಸಿರುವುದಾಗಿ ಘೋಷಿಸಿದೆ. id="toptextpromo">ಗಮನಾರ್ಹವೆಂದರೆ
ಬೆಂಗಳೂರು ನೆಲೆಯ ಕಿಂಗ್ ಫಿಷರ್ ಏರ್ ಲೈನ್ಸ್ ಕಂಪನಿ ಹಾರಾಟ ಆರಂಭಿಸಿದ್ದು 2005ರಲ್ಲಿ. ಆದರೆ ಇದುವರೆಗೆ ಕಂಪನಿ ನಿವ್ವಳ ಲಾಭ ಕಂಡಿಲ್ಲ. id='are-slot-1' class='oiad oi-axt oiadv'> id='top-searched-articles'>ವರದಿಯ
ಪ್ರಕಾರ 2011ರ ಕೊನೆಯ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ ಕಂಪನಿಯ ನಿವ್ವಳ ನಷ್ಟ ಈ ಬಾರಿ ದುಪ್ಪಟ್ಟಾಗಿದೆ. ಇದು ಕಂಪನಿಯ ಅಸ್ತಿತ್ವಕ್ಕೇ ಮುಳುವಾಗುವ ಲಕ್ಷಣಗಳಿವೆ. ಅಕ್ಟೋಬರ್-ನವೆಂಬರ್ 2011ರಲ್ಲಿ 880 ಲಕ್ಷ ಡಾಲರ್ ನಷ್ಟವುಂಟಾಗಿದೆ. ಒಂದು ವರ್ದ ಹಿಂದೆ ಇದೇ ಅವಧಿಯಲ್ಲಿ ಇದರರ್ಧ ಅಂದರೆ 254 ಕೋಟಿ ರು ನಷ್ಟವುಂಟಾಗಿತ್ತು. ಮಾರಾಟ ಪ್ರಮಾಣ ಶೇ. 25ರಷ್ಟು ಕುಸಿತ ಕಂಡಿದೆ. 1790 ಕೋಟಿ ರು. ನಿಂದ 1,342 ರು. ಗೆ ಇಳಿದಿದೆ. ಇನ್ನು ಸಾಲದ ಮೇಲಿನ ಬಡ್ಡಿ ಪ್ರಮಾಣವೇ 350 ಕೋಟಿ ರೂ. ಗೆ ಜಿಗಿದಿದೆ.











Click it and Unblock the Notifications