ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಚಾರ್ಯರಿಗೆ ಶಾಪಗ್ರಸ್ತ ದೇವರ ಖಾತೆ ಮುಳುವಾಯಿತೇ?

By Mahesh
|
Google Oneindia Kannada News

VD Acharya
ಬೆಂಗಳೂರು, ಫೆ.15: ಯಾರಿಗೂ ಬೇಡವಾದ ಶಾಪಗ್ರಸ್ತ ಖಾತೆಯೆಂದೇ ಹೆಸರುವಾಸಿಯಾಗಿರುವ 'ಮುಜರಾಯಿ ಖಾತೆ' ಯನ್ನು ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಯಾರಾದರೂ ಪಾಪದವರ ಹೆಗಲಿಗೆ ಹಾಕುವ ನಿರ್ಧಾರ ಮಾಡಿದ್ದರು.

ಆಗಿನ ಗೃಹ ಸಚಿವರಾಗಿದ್ದ ವಿಎಸ್ ಆಚಾರ್ಯ ಅವರು ಸಂತೋಷದಿಂದ ಶಾಪಗ್ರಸ್ತ ದೇವರ ಉತ್ಸವವನ್ನು ಹೊತ್ತುಕೊಳ್ಳಲು ಸಿದ್ಧರಾದರು.

ಇದಕ್ಕೂ ಮುನ್ನ ಆ ಖಾತೆಯನ್ನು ಹೊಂದಿದ್ದ ವಿ ಸೋಮಣ್ಣ ಉಪಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದರು. ವೈದ್ಯ ಶಿಕ್ಷಣ ಸಚಿವರಾಗಿದ್ದ ರಾಮಚಂದ್ರೇಗೌಡರು ಮುಜರಾಯಿ ಖಾತೆ ಒಲ್ಲೆ ಎಂದರು.

ಹೆಚ್ಚು ದಿನ ಖಾತೆಯನ್ನು ಇಟ್ಟುಕೊಳ್ಳಲು ಹೆದರಿದ ಯಡಿಯೂರಪ್ಪ ಅವರು ತರಾತುರಿಯಲ್ಲಿ ಆಚಾರ್ಯರ ಹೆಗಲಿಗೆ ದೇವರ ಭಾರವನ್ನು ಹೊರೆಸಿದರು.

ಮುಜರಾಯಿ ಖಾತೆ ವಹಿಸಿಕೊಂಡ ಸಚಿವರುಗಳು ನಂತರದ ಚುನಾವಣೆಯಲ್ಲಿ ಸೋಲುಂಡ ಸಂಪ್ರದಾಯಗಳು ಬೆಳೆದು ಬಂದಿದೆ.

ಕುಮಾರಸ್ವಾಮಿ ಸರಕಾರದಲ್ಲಿ ಮುಜರಾಯಿ ಸಚಿವರಾಗಿದ್ದ ನಾಗರಾಜ ಶೆಟ್ಟಿ, ಇದಕ್ಕೂ ಮೊದಲು ಈ ಖಾತೆ ವಹಿಸಿಕೊಂಡಿದ್ದ ಸುಮಾ ವಸಂತ್, ಎಂಪಿ ಪ್ರಕಾಶ್ ನಂತರದ ಚುನಾವಣೆಯಲ್ಲಿ ಸೋಲುಂಡಿದ್ದರು. ಈ ಸಂಪ್ರದಾಯಕ್ಕೆ ಇತ್ತೀಚಿನ ಉದಾಹರಣೆಯೆಂದರೆ

ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿ, ಈ ಖಾತೆ ವಹಿಸಿಕೊಂಡು ನಂತರದ ಚುನಾವಣೆಯಲ್ಲಿ ಗೋವಿಂದರಾಜನಗರದಿಂದ ಸ್ಪರ್ಧಿಸಿ ಸೋತಿದ್ದು 'ಸೋಲಿಲ್ಲದ ಸರದಾರ' ವಿ ಸೋಮಣ್ಣ.

ನಂತರ ಈ ಖಾತೆ ಭಾರ ಹೊತ್ತವರು ಏಡುಕುಂಡಲವಾದ ವೆಂಕಟರಮಣ ಗೋವಿಂದ ಎನ್ನುವ ಮಾಲೂರು ಕೃಷ್ಣಯ್ಯ ಶೆಟ್ಟರು.. ಶೆಟ್ರು ಪಾಪ ಜೈಲುವಾಸ ಕೂಡಾ ಕಂಡರು.

ಕೊನೆಗೆ ಮತ್ತೊಮ್ಮೆ ಉನ್ನತ ಶಿಕ್ಷಣ ಸಚಿವರಾಗಿದ್ದ ಆಚಾರ್ಯ ಅವರ ಹೆಗಲಿಗೆ ಈ ಬೇಡದ ದೇವರ ಖಾತೆ ಬಿತ್ತು.ಆದರೆ, ಈ ಖಾತೆ, ದೇವರ ಸೇವೆ ಯಾವುದೂ ಅವರ ಸಾವನ್ನು ತಡೆಯಲು ಆಗಲಿಲ್ಲ. ಮುಜರಾಯಿ ಖಾತೆ ಹೊಂದಿರುವ ಸಚಿವರಿಗೆ ಒಳ್ಳೆ ಯೋಗವಿಲ್ಲ ಎಂಬ ಮಾತು ಕಾಕತಾಳೀಯವಾಗಿಯಾದರೂ ನಿಜವಾಗುತ್ತಿರುವುದು ಸುಳ್ಳಲ್ಲ.

English summary
Later Dr. VS Acahrya has taken burden of leading the unwanted Muzurai Department twice. History suggests that Muzurai Ministership is curse and no one can have victory in election
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X