ಎಸ್ಎಲ್ ಭೈರಪ್ಪ ಅವರ ಜೊತೆ ಸಂವಾದಕ್ಕೆ ಬನ್ನಿ

Sl Bhyrappa
ಬೆಂಗಳೂರು,ಫೆ.15: ಕವಿ ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿ ಅವರ ಸಂಪಾದಕತ್ವದ 'ಡಾ.ಎಲ್ ಭೈರಪ್ಪನವರ ಕಾದಂಬರಿಗಳಲ್ಲಿ ಧರ್ಮ ಮತ್ತು ಸಂಸ್ಕೃತಿ'ಎಂಬ ಪುಸ್ತಕ ಲೋಕಾರ್ಪಣೆ ಫೆ.17 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ಸುಂದರ ಪ್ರಕಾಶನದ ಅಂಗಸಂಸ್ಥೆಯಾಗಿರುವ ಸುಂದರ ಸಾಹಿತ್ಯ ಹೊರ ತಂದಿರುವ ಈ ಕೃತಿಯನ್ನು ಶುಕ್ರವಾರ ಸಂಜೆ 5:30 ಗಂಟೆಗೆ ಲೋಕಾರ್ಪಣೆ ಮಾಡಲಾಗುವುದು.

ಎಚ್. ಎಸ್. ವೆಂಕಟೇಶ್ ಮೂರ್ತಿಯವರ ಸಂಪಾದಕತ್ವದ ಪುಸ್ತಕದಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯ, ಪ್ರೊ.ಎಲ್.ಎಸ್. ಶೇಷಗಿರಿರಾವ್, ಡಾ.ಎನ್.ಎಸ್.ಲಕ್ಷ್ಮಿ ನಾರಾಯಣ ಭಟ್ಟ ಸೇರಿದಂತೆ ನಾಡಿನ ಜನಪ್ರಿಯ ಲೇಖಕರ ಲೇಖನಗಳಿವೆ.

ಸಂವಾದ ಕಾರ್ಯಕ್ರಮ: ಪುಸ್ತಕ ಬಿಡುಗಡೆ ಕಾರ್ಯಕ್ರಮದ ನಂತರ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಲ್. ಭೈರಪ್ಪ ಅವರೊಡನೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಪ್ರೊ.ಎಸ್.ರಾಮಸ್ವಾಮಿ, ಪ್ರೊ.ಎಚ್.ಎಸ್. ವೆಂಕಟೇಶ್ ಮೂರ್ತಿ, ಪ್ರೊ.ಜಿ.ಬಿ ಹರೀಶ್ ಮತ್ತು ಎನ್.ಎಸ್. ಶ್ರೀಧರ ಮೂರ್ತಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಪಂ. ನಾಗರಾಜರಾವ್ ಹವಾಲ್ದಾರ್ ಅವರಿಂದ ಹಿಂದೂಸ್ಥಾನಿ ಗಾಯನ ಏರ್ಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+