ಕಿಂಗ್ ಫಿಷರ್ ಸಂಕಷ್ಟ: ಫಲಿತಾಂಶ ಗುಪ್ತ್ ಗುಪ್ತ್
ಬೆಂಗಳೂರು,
ಫೆ.15: ಆರ್ಥಿಕ ಸಂಕಷ್ಟದಿಂದ ಬಸವಳಿಯುತ್ತಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಕಂಪನಿ 'ತೀವ್ರ ಆರ್ಥಿಕ ಹಿಂಜರಿತದಿಂದಾಗಿ' ತನ್ನ ತ್ರೈಮಾಸಿಕ ಹಣಕಾಸು ವರದಿಯನ್ನು ಬಹಿರಂಗಗೊಳಿಸಲು ಹಿಂಜರಿದಿದೆ. id="toptextpromo">ಪೂರ್ವ
ನಿಗದಿಯಂತೆ, ವಿಜಯ್ ಮಲ್ಯ ಮಾಲೀಕತ್ವದ, ಬೆಂಗಳೂರು ನೆಲೆಯ ಕಿಂಗ್ ಫಿಷರ್ ಏರ್ ಲೈನ್ಸ್ ಕಂಪನಿ ಫೆ.14ರಂದೇ ತನ್ನ ತ್ರೈಮಾಸಿಕ ವರದಿಯನ್ನು ಪ್ರಕಟಿಸಬೇಕಿತ್ತು. ಆದರೆ ಕಂಪನಿಯ ಆಡಳಿತ ಮಂಡಳಿ ಸತತವಾಗಿ ಆಂತರಿಕ ಸಭೆಗಳನ್ನು ನಡೆಸಿದ್ದು, ತನ್ನ ತ್ರೈಮಾಸಿಕ ಲೆಕ್ಕದ ಅನುಮೋದನೆಗೆ ಸುತರಾಂ ಒಪ್ಪಿಗೆ ಸೂಚಿಸಿಲ್ಲ! id='are-slot-1' class='oiad oi-axt oiadv'> id='top-searched-articles'>ಆದರೆ
'ಹಾರ್ಡ್ ವೇರ್ ಸಮಸ್ಯೆಯಿಂದಾಗಿ ಕಂಪ್ಯೂಟರಿನಿಂದ ಲೆಕ್ಕ ಹೊರತೆಗೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ವಿಳಂವಾಗಿದೆ' ಎಂದು ಇಂದು ಕಂಪನಿ ಹೇಳಿಕೊಂಡಿದೆ. ಶೀಘ್ರವೇ ತನ್ನ ಲೆಕ್ಕವನ್ನು ಆಡಿಟರ್ ಗೆ ಒಪ್ಪಿಸುವುದಾಗಿಯೂ ಕಂಪನಿ ಹೇಳಿದೆ.











Click it and Unblock the Notifications