ಸಿಎಂ ಸದಾನಂದ ತಲೆ ಮೇಲೆ ಖಾತೆಗಳ ಹೊರೆ

ಅನೇಕ ಸಮಸ್ಯೆ, ಒತ್ತಡದ ನಡುವೆಯೂ ಅಷ್ಟೂ ಖಾತೆಗಳನ್ನು ನಿರ್ವಹಿಸುತ್ತಿದ್ದೇನೆ. ಆದರೆ, ಬಹುಕಾಲ ಈ ಭಾರವನ್ನು ನಾನು ಹೊರಲು ಸಾಧ್ಯವಿಲ್ಲ. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಿ, ಭಾರ ಕಡಿಮೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಸಂಸದೀಯ ವ್ಯವಹಾರ, ಹಣಕಾಸು, ಬಿಡಬ್ಲ್ಯೂಎಸ್ ಎಸ್ ಬಿ, ಗುಪ್ತಚರ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಗಣಿಗಾರಿಕೆ, ಅಲ್ಪಸಂಖ್ಯಾತರ ಕಲ್ಯಾಣ, ಅರೋಗ್ಯ, ಅರಣ್ಯ, ಬಾಕಿ ಉಳಿದ ಎಲ್ಲಾ ಖಾತೆಗಳು ಸಿಎಂ ಬಳಿ ಇದೆ.
ಧೀಮಂತ ರಾಜಕಾರಣಿ ವಿಎಸ್ ಆಚಾರ್ಯ ಅವರ ಅಕಾಲಿಕ ನಿಧನದಿಂದಾಗಿ ಅವರು ನಿರ್ವಹಿಸುತ್ತಿದ್ದ ಉನ್ನತ ಶಿಕ್ಷಣ ಹಾಗೂ ಉಳಿದ ಮೂರು ಖಾತೆಗಳು ಕೂಡಾ ಸಿಎಂ ಪಾಲಿಗೆ ಬಂದಿದೆ.
ಲೋಕಾಯುಕ್ತ ನೇಮಕಾತಿ ಕುರಿತಂತೆ ಹೈಕೋರ್ಟ್ ನ್ಯಾಯಮೂರ್ತಿ, ವಿರೋಧ ಪಕ್ಷದ ನಾಯಕರು ಸೇರಿದಂತೆ ಐದು ಮಂದಿಯ ಸಲಹೆ ಕೋರಿ ಪತ್ರ ಬರೆಯಲಾಗಿದೆ. ಆದಷ್ಟು ಬೇಗ ನೂತನ ಲೋಕಾಯುಕ್ತರ ನೇಮಕಾತಿ ಆಗಲಿದೆ ಎಂದರು.
ಫೆ.16 ರಂದು ಅಥಣಿಯಲ್ಲಿ ನಡೆಯಲಿರುವ ಮಾಜಿ ಸಚಿವ ಲಕ್ಷ್ಮಣ ಸವದಿ ಅವರ ಹುಟ್ಟುಹಬ್ಬದ ಸಮಾವೇಶದಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಸದಾನಂದ ಗೌಡರು ಹೇಳಿದ್ದಾರೆ.












Click it and Unblock the Notifications