'ಸೀಟಿ' ರವಿ ಪೋಕರಿ ರೀ: ಎಚ್ ಡಿ ಕುಮಾರಸ್ವಾಮಿ
ಚಿಕ್ಕಮಗಳೂರು,
ಫೆ.14: ಜನವಾಹಿನಿ ರಥವೇರಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಿಜೆಪಿ ವಕ್ತಾರ ಸಿಟಿ ರವಿಯನ್ನು ಅವರ ತವರಿನಲ್ಲೇ ಕೆಣಕಿದ್ದಾರೆ. 'ಚುನಾವಣೆಯಲ್ಲಿ ಮಾಡಿದ್ದ ಸಾಲವನ್ನು ತೀರಿಸಲು ನನ್ನಿಂದ ನೆರವು ಪಡೆದಿದ್ದ ಪೋಕರಿ, ಪುಢಾರಿ ಶಾಸಕ ಸಿಟಿ ರವಿ' ಎಂದು ಜರಿದಿದ್ದಾರೆ. 'ಹೀಗೆ ನನ್ನ ಋಣದಲ್ಲಿರುವ ರವಿ ಅದ್ಯಾವ ಮುಖವಿಟ್ಟುಕೊಂಡು ನನ್ನ ಮತ್ತು ನನ್ನ ಕುಟುಂಬವನ್ನು ಪ್ರಶ್ನಿಸುತ್ತಿದ್ದಾರೆ' ಎಂದೂ ಜಾಡಿಸಿದ್ದಾರೆ. id="toptextpromo">'ಇಂತಿಪ್ಪ
ಶಾಸಕನಿಂದ ಇಲ್ಲಿನ ಪ್ರಾಕೃತಿಕ ಸಂಪತ್ತಿನ ಲೂಟಿ ನಡೆಯುತ್ತಿದೆ. ಜಲ್ಲಿ, ಮರಳು, ಕೆರೆ ಎಲ್ಲ ಅಭಿವೃದ್ಧಿ ಕೆಲಸಗಳಲ್ಲೂ ಅಕ್ರಮ ನಡೆಯುತ್ತಿದೆ. ಭಜನೆ ಮಾಡುತ್ತಾ ಮಹಾ ದೇಶ ಭಕ್ತನಂತೆ ನಟಿಸುತ್ತಾನೆ' ಎಂದು ಆರೋಪಿಸಿದ ಎಚ್ ಡಿಕೆ, 'ಬಸವನಹಳ್ಳಿ ಕೆರೆಯಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಬದಲು ಈತನ ಪ್ರತಿಮೆ ನಿಲ್ಲಿಸಬೇಕು' ಎಂದು ಸಲಹೆ ನೀಡಿದರು. id='are-slot-1' class='oiad oi-axt oiadv'> id='top-searched-articles'>ದೊಡ್ಡ
ಗೌಡರ ಎದುರು ಕೈಕಟ್ಟಿ ನಿಂತಿದ್ದರು: 'ಬಿಜೆಪಿಯ ಎಲ್ಲರೂ ಬಂದು ಅಧಿಕಾರ ನೀಡುವಂತೆ ನಮ್ಮ ತಂದೆಯ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು. ಮಂತ್ರಿ ಮಾಡುವಂತೆ ಯಡ್ಯೂರಪ್ಪ ಗೋಗರೆದಿದ್ದರು. ಆಗ ನಾನು ತಂದೆಯ ವಿರೋಧ ಲೆಕ್ಕಿಸದೆ ಅವರಿಗೆ ನೋವು ನೀಡಿ ಬಿಜೆಪಿಗೆ ಜೀವದಾನ ನೀಡಿದೆ' ಎಂದು ಕುಮಾರಸ್ವಾಮಿ ಪಶ್ಚಾತ್ತಾಪ ಪಟ್ಟರು.











Click it and Unblock the Notifications