ಬೆಂಗಳೂರಿನ ರೆಡ್ ರೋಸ್ ಗೆ ಭರ್ಜರಿ ಡಿಮ್ಯಾಂಡ್

Posted By:
Subscribe to Oneindia Kannada
Valentines Day 2012
ಶಿಲ್ಲಾಂಗ್, ಫೆ.14: ಪ್ರೇಮಿಗಳ ದಿನಗಳ ಸಲುವಾಗಿ ಕೆಂಪು ಗುಲಾಬಿಗಳು ಭರ್ಜರಿ ಬೇಡಿಕೆ ಪಡೆದಿದೆ. ಈಶಾನ್ಯ ರಾಜ್ಯಗಳಿಗೆ ಗುಲಾಬಿ ರಫ್ತು ಹೆಚ್ಚುತ್ತಿದೆ ಎಂದು ಬೆಂಗಳೂರಿನ ಗುಲಾಬಿ ರಫ್ತು ಸಂಸ್ಥೆ ಹೇಳಿದೆ.

ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್ ಹಾಗೂ ಮಿಜೋರಂನಲ್ಲಿರುವ ರೀಟೈಲ್ ಮಳಿಗೆಗಳಲ್ಲಿ ಬೆಂಗಳೂರಿನಿಂದ ಸುಮಾರು 38,000ಕ್ಕೂ ಅಧಿಕ ಕೆಂಪು ಗುಲಾಬಿಗಳು ರಫ್ತಾಗಿದೆ. ಪ್ರೇಮಿಗಳ ದಿನದಂದು ಇನ್ನೂ ಹೆಚ್ಚು ಗುಲಾಬಿಗಳಿಗೆ ಬೇಡಿಕೆ ಬರಲಿದೆ ಎಂದು ಜೋಪರ್ ಎಕ್ಸ್ ಪೋರ್ಟ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಶಾ ಹೇಳಿದ್ದಾರೆ.

ದಿನವೊಂದಕ್ಕೆ 10 ಸಾವಿರ ಹೂಗಳಂತೆ ಈಶಾನ್ಯ ರಾಜ್ಯಗಳು ಗುಲಾಬಿ ಬೇಡಿಕೆ ನೀಡುತ್ತಿದೆ. 20 ರು ಪ್ರತಿ ಗುಲಾಬಿ ಲೆಕ್ಕದಂತೆ ರಫ್ತು ಮಾಡಲಾಗುತ್ತಿದೆ. ಒಣಗಿದ ಹೂವುಗಳಿಗೂ ಬೇಡಿಕೆ ಹೆಚ್ಚುತ್ತಿರುವುದರಿಂದ ಹೈದರಾಬಾದಿನಿಂದ ಹೆಚ್ಚಿನ ಹೂಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ರಾಜೇಶ್ ಹೇಳಿದ್ದಾರೆ.

ಆ ಭಾಗದಲ್ಲಿ ಕೊರೆಯುವ ಚಳಿಯಲ್ಲೂ(ಮೈನಸ್ 10 ಡಿಗ್ರಿ ತನಕ ಇದೆ) ಪ್ರೇಮಿಗಳ ದಿನದಂದು ಅರಳಿದ ಗುಲಾಬಿಯ ಕೈಯಲ್ಲಿ ಹಿಡಿದು ಪ್ರೇಮಿಗಳು ಹಬ್ಬ ಆಚರಣೆಗೆ ಮುಂದಾಗಿದ್ದಾರೆ ಎಂದು ರಾಜೇಶ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The demand for Red Roses is growing extortionately as the North-East is all set to celebrate Valentines day on Feb 14. On an average day north-east consumes about 10,000 flower varieties each day said Rajesh Shah, Managing Director of Zopar Exports, leading rose cultivator.
Please Wait while comments are loading...