ಕೋರ್ಟ್ ನಿಂದನೆ : ಪಾಕ್ ಪ್ರಧಾನಿ ಗಿಲಾನಿ ಅಪರಾಧಿ
ಇಸ್ಲಾಮಾಬಾದ್,
ಫೆ. 13 : ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿದ್ದ ಪಾಕಿಸ್ತಾನದ ಪ್ರಧಾನಿ ಯುಸೂಫ್ ರಾಜಾ ಗಿಲಾನಿ (59) ಅವರು ಅಪರಾಧಿ ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಪ್ರಮುಖ ತೀರ್ಪನ್ನು ನ್ಯಾ. ನಾಸಿರ್-ಉಪ್-ಮುಲ್ಕ್ ನೇತೃತ್ವದ ಪೀಠ ಸೋಮವಾರ ನೀಡಿದೆ. ಸುಪ್ರೀಂ ಕೋರ್ಟ್‌ನ 4ನೇ ನಂಬರ್ ಕೋಣೆಯಲ್ಲಿ ಏಳು ಸದಸ್ಯರ ಪೀಠ ಈ ಮಹತ್ವದ ತೀರ್ಪನ್ನು ನೀಡಿದೆ. id="toptextpromo">ಪಾಕ್
ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರು ಸ್ವಿಟ್ಜರ್‌ಲೆಂಡ್‌ನಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದ ಹಣ ಕೂಡಿಟ್ಟಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಬಾರಿಬಾರಿ ಆದೇಶಿ ನೀಡಿದ್ದರೂ ಯುಸೂಫ್ ರಾಜಾ ಗಿಲಾನಿ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದರು. ಎಲ್ಲ ಏಳು ನ್ಯಾಯಮೂರ್ತಿಗಳು ಗಿಲಾನಿ ಅಪರಾಧಿ ಎಂದೇ ತೀರ್ಪು ನೀಡಿದ್ದಾರೆ. ಆದರೆ ಆರೋಪಗಳನ್ನು ಗಿಲಾನಿ ಅಲ್ಲಗಳೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈಗ
ಸಾಮಾನ್ಯ ಆರೋಪಿಯಂತೆ ಗಿಲಾನಿ ಅವರು ಮೊಕದ್ದಮೆಯನ್ನು ಎದುರಿಸಬೇಕಾಗಿದೆ. ಫೆ.27ರಿಂದ ಅವರ ವಿಚಾರಣೆ ಆರಂಭವಾಗಲಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಅವರ ಆರೋಪ ಸಾಬೀತಾದರೆ ಸಂಸತ್ ಸದಸ್ಯತ್ವವನ್ನು ಅವರು ಕಳೆದುಕೊಳ್ಳಲಿದ್ದಾರೆ. ಗಿಲಾನಿ ಅವರು ಕೋರ್ಟ್ ನಿಂದನೆ ಆರೋಪದಲ್ಲಿ ಸಿಕ್ಕಿಬಿದ್ದಿರುವ ಮೊಟ್ಟಮೊದಲ ಪಾಕಿಸ್ತಾನದ ಪ್ರಧಾನಿಯಾಗಿದ್ದಾರೆ.











Click it and Unblock the Notifications