ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಕುಮಾರಸ್ವಾಮಿಗೆ ಹಿನ್ನಡೆ: ಸುಪ್ರೀಂ ತುರ್ತು ನೋಟಿಸ್

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  supreme-court-notice-to-hd-kumaraswamy-feb13
  ಬೆಂಗಳೂರು, ಫೆ. 13: ವಿಶ್ವಭಾರತಿ ಹೌಸಿಂಗ್‌ ಕೋ ಆಪರೇಟಿವ್ ಸೊಸೈಟಿ ಹಾಗೂ ಜಂತಕಲ್‌ ಗಣಿಗಾರಿಕೆ ಗುತ್ತಿಗೆ ನವೀಕರಣ ಪ್ರಕರಣಗಳ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಸುಪ್ರೀಮ್ ಕೋರ್ಟ್‌ ಸೋಮವಾರ ತುರ್ತುನೋಟಿಸ್ ಜಾರಿ ಮಾಡಿದೆ. ಈ ಎರಡೂ ಪ್ರಕರಣಗಳ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ವಜಾಗೊಳಿಸಿರುವುದನ್ನು ಪ್ರಶ್ನಿಸಿ ವಕೀಲ ವಿನೋದ್‌ ಕುಮಾರ್‌ ಅವರು ಸುಪ್ರೀಮ್ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

  ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ, ಕುಮಾರಸ್ವಾಮಿಯವರಿಗೆ ನೊಟೀಸ್ ಜಾರಿಗೊಳಿಸಿದ್ದು, ನೋಟಿಸ್‌ಗೆ ಉತ್ತರಿಸಲು ನಾಲ್ಕು ವಾರಗಳ ಗಡುವು ನೀಡಿದೆ.

  ಈ ಮಧ್ಯೆ, ತಮ್ಮ ವಿರುದ್ಧದ ಅಕ್ರಮ ಗಣಿ ಆರೋಪಗಳ ಕುರಿತು ಸುಪ್ರೀಮ್ ಕೋರ್ಟ್‌ ನೋಟಿಸ್ ನೀಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೋರ್ಟ್‌ ನೋಟಿಸ್ ನೀಡಿರುವುದರಿಂದ ತಮ್ಮ ರಾಜಕೀಯ ಭವಿಷ್ಯಕ್ಕೆ ಏನೂ ತೊಂದರೆಯಿಲ್ಲ. ಇದು ಬಿಜೆಪಿ ಸರಕಾರದ ಷಡ್ಯಂತರ. ನ್ಯಾಯಾಲಯದಲ್ಲಿ ಹೋರಾಡಿ, ನಾನೇನು ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತುಪಡಿಸುವೆ ಎಂದಿದ್ದಾರೆ.

  ಕಳೆದ ನವೆಂಬರ್‌ನಲ್ಲಿ ವಿಶ್ವ ಭಾರತಿ ಹೌಸಿಂಗ್‌ ಕೋ ಆಪರೇಟಿ ಸೊಸೈಟಿನಲ್ಲಿ ಅಕ್ರಮ ನಿವೇಶನ ಹಂಚಿಕೆ ಹಾಗೂ ಜಂತಕಲ್‌ ಗಣಿಗಾರಿಕೆ ಗುತ್ತಿಗೆ ನವೀಕರಣ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಮಧುಗಿರಿ ಶಾಸಕಿ ಅನಿತಾ ಕುಮಾರಸ್ವಾಮಿ ವಿರುದ್ಧ ತನಿಖೆ ನಡೆಸುವಂತೆ ಕೋರಿ ವಿನೋದ್‌ ಕುಮಾರ್‌ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  An urgent legal notice has been sent to JD-S MP and sate leader HD Kumaraswamy from the Supreme Court on the alleged recommendation he made to permit Iron ore mining in 550 acres in Sandur Taluk (Bellary). The SC had demanded his reply to the notice to quickly.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more