ರೈಲ್ವೇ ಬಜೆಟ್ 2012: ಕರ್ನಾಟಕದ ಬೇಡಿಕೆಗಳು

ಕರ್ನಾಟಕದ ಬೇಡಿಕೆ ಪಟ್ಟಿಯನ್ನು ಕೇಂದ್ರ ರೈಲ್ವೇ ಸಚಿವ ದಿನೇಶ್ ತ್ರಿವೇದಿ ಹಾಗೂ ರಾಜ್ಯ ಸಚಿವ ಕೆಎಚ್ ಮುನಿಯಪ್ಪ ಅವರಿಗೆ ಸಲ್ಲಿಸಲಾಗುತ್ತದೆ. ಸುಮಾರು ಮೂರು ವರ್ಷಗಳಿಂದ ಇದೇ ಬೇಡಿಕೆ ಪಟ್ಟಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುತ್ತಿದೆ.
* ಗದಗ-ಹಾವೇರಿ(80ಕಿ.ಮೀ)
* ಆಲಮಟ್ಟಿ (ಮುದ್ದೇಬಿಹಾಳ ಮಾರ್ಗ) (150 ಕಿ.ಮೀ)
* ಆಲಮಟ್ಟಿ-ಕೊಪ್ಪಳ (ಕೂಡಲಸಂಗಮ ಮಾರ್ಗ)(124 ಕಿ.ಮೀ)
* ರಾಯಚೂರು-ಬಾಗಲಕೋಟೆ
* ತುಮಕೂರು-ತಿಪಟೂರು-ಅರಸೀಕೆರೆ( ಜೋಡಿ ಮಾರ್ಗ)
* ಬಿಜಾಪುರ-ಅಥಣಿ-ಶೆಡಬಾಳ ಹಾಗೂ ಮಂಗಳೂರು-ಬೆಂಗಳೂರು(ಜೋಡಿ ಮಾರ್ಗ)
ಹೊಸ ಮಾರ್ಗಗಳಿಗಾಗಿ ಸುಮಾರು 2,493 ಎಕರೆ ಭೂಮಿಯನ್ನು ರೈಲ್ವೇ ಇಲಾಖೆಗೆ ನೀಡಲಾಗುತ್ತಿದೆ. ಗದಗ-ವಾಡಿ ಹಾಗೂ ಶ್ರೀನಿವಾಸಪುರ-ಮದನಪಲ್ಲಿ ಮಾರ್ಗಗಳನ್ನು ಮುಂಬರುವ ಬಜೆಟ್ ನಲ್ಲಿ ಸಚಿವ ದಿನೇಶ್ ಘೋಷಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿಗೆ ಹೊಸ ವ್ಯವಸ್ಥೆ: ನಗರದ ಕೇಂದ್ರ ಭಾಗದಿಂದ ಆನೇಕಲ್, ಮಾಲೂರು, ದೇವನಹಳ್ಳಿ, ತುಮಕೂರು, ನೆಲಮಂಗಲ ಹಾಗೂ ಬಿಡದಿಗೆ ತೆರಳಲು ಅನುಕೂಲವಾಗುವಂತೆ ಹೊಸ ರೈಲ್ವೇ ವ್ಯವಸ್ಥೆ ಕಲ್ಪಿಸುವಂತೆ ರೈಲ್ವೇ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
ಮೆಟ್ರೋ, ಮೋನೋ, ಹೈ ಸ್ಪೀಡ್ ರೈಲು ಹಾಗೂ ಬಸ್ ತ್ವರಿತ ಸೇವೆ ವ್ಯವಸ್ಥೆ ಅಲ್ಲದೆ ಸಾರ್ವಜನಿಕ ರೈಲು ವ್ಯವಸ್ಥೆ ಅಗತ್ಯತೆ ಇದೆ ಎಂದು ಸದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications