ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆಯಲ್ಲಿ 26 ಲಕ್ಷ ಬೆಂಗಳೂರಿಗರಿಗೆ ನೀರು ಸಿಗಲ್ಲ

By Mahesh
|
Google Oneindia Kannada News

Drinking Water Scarcity
ಬೆಂಗಳೂರು, ಫೆ. 8: ಸುಮಾರು 26 ಲಕ್ಷ ಬೆಂಗಳೂರಿಗರು ಕುಡಿಯುವ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಲಿದೆ. ಮಾರ್ಚ್ ತಿಂಗಳ ಅಂತ್ಯಕ್ಕೆ ನಗರಕ್ಕೆ ಬರಬೇಕಿದ್ದ ಕಾವೇರಿ ನೀರು ಗಲ್ಲಿಗಳ ನಲ್ಲಿಗಳಲ್ಲಿ ಬರುವುದಿಲ್ಲ ಎಂದು ಜಲಮಂಡಳಿ ಹೇಳಿದೆ.

ಕಾವೇರಿ ನೀರು ಸರಬರಾಜು ಯೋಜನೆ(CWSS) 4ನೇ ಹಂತ ಎರಡನೇ ಘಟ್ಟ ಮಾರ್ಚ್ 2012ರ ವೇಳೆಗೆ ಮುಕ್ತಾಯವಾಗಬೇಕಿತ್ತು. ಬಿಬಿಎಂಪಿಯ ಹೊಸ ಬಡಾವಣೆಗಳಿಗೆ ಈ ನೀರು ಸರಬರಾಜು ಮಾಡುವ ಉದ್ದೇಶ ಹೊಂದಲಾಗಿದೆ.

ಆದರೆ, ಕಾಮಗಾರಿ ವಿಳಂಬವಾಗಲಿದ್ದು ಜೂನ್ ತಿಂಗಳ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಬಿಡಬ್ಲ್ಯೂಎಸ್ ಎಸ್ ಬಿ ಮುಖ್ಯಸ್ಥ ಗೌರವ್ ಗುಪ್ತಾ ಹೇಳಿದ್ದಾರೆ.

ಸುಮಾರು 3383.70 ಕೋಟಿ ವೆಚ್ಚದ ಈ ಯೋಜನೆಗೆ ಜಪಾನ್ ದೇಶದ ನೆರವು ಸಿಕ್ಕಿದೆ. ಸುಮಾರು 500 ಮಿಲಿಯನ್ ಲೀಟರ್ ನೀರನ್ನು ಪ್ರತಿದಿನ ಬೆಂಗಳೂರಿಗೆ ಹರಿಸಲಾಗುವುದು. ಸುಮಾರು 172 ಕಿ.ಮೀ ಪೈಪ್ ಲೇನ್ ಹಾಕಲಾಗಿದ್ದು 2005ರಲ್ಲಿ ಆರಂಭವಾದ ಯೋಜನೆ ಬಹುತೇಕ ಮುಕ್ತಾಯ ಹಂತದಲ್ಲಿದೆ.

ಗುತ್ತಿಗೆ ಕೂಲಿಗಳ ಅಲಭ್ಯತೆ, ಮೆಟ್ರೋ ಯೋಜನೆ, ಕಾರ್ಮಿಕರ ಪ್ರತಿಭಟನೆ ಇತ್ಯಾದಿ ತೊಂದರೆಯಿಂದ ಕಾಮಗಾರಿ ವಿಳಂಬವಾಗಿದೆ. ಹಾರೋಹಳ್ಳಿ, ತಾತಗುಣಿ ಹಾಗೂ ತಿಪ್ಪಗೊಂಡನಹಳ್ಳಿ ಬಳಿ ಮೂರು ಪಂಪಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲಾಗುವುದು. ಶೇ.70 ರಷ್ಟು ಕಾಮಗಾರಿ ಮುಗಿದಿದ್ದು, ಆದಷ್ಟು ಬೇಗ ನೀರು ಹರಿಸಲಾಗುವುದು ಎಂದು ಜಲಮಂಡಲಿ ಹೇಳಿದೆ.

English summary
Over 26 lakh Bangaloreans will face water scarcity this summer as Cauvery Water Supply Scheme (CWSS) Stage IV Phase II supply delayed by three months. The Rs 3383.70-crore project was earlier scheduled to complete by March 2012 said BWSSB Chairman Gaurav Gupta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X