ಬನ್ನೂರಮಠ ಲೋಕಪೀಠ ಬೇಡವೆನ್ನಲು ಕಾರಣವೇನು?

ಆದರೆ ಸುಮಾರು ಐದು ತಿಂಗಳಿಂದ ತಮ್ಮ ವಿರುದ್ಧ ಟೀಕಾಸ್ತ್ರಗಳು ನುಗ್ಗಿಬರುತ್ತಿದ್ದರೂ ಮೌನಕ್ಕೆ ಶರಣಾಗಿದ್ದ ನ್ಯಾ ಬನ್ನೂರಮಠ ಅವರು ಇದ್ದಕ್ಕಿದ್ದಂತೆ ಒಲ್ಲದ ಮನಸ್ಸಿನಿಂದ ಸದಾನಂದ ಗೌಡರಿಗೆ ಒಲವಿನ ಓಲೆ ಬರೆದು ಪೀಠ ತ್ಯಾಗ ನಿರ್ಧಾರಕ್ಕೆ ಬರಲು ಕಾರಣವಾದರೂ ಏನು ಎಂದು ಕೆದಕಿದಾಗ ...
ವಾಸ್ತವವಾಗಿ, ಲೋಕಾಯುಕ್ತ ಪೀಠಕ್ಕೆ ನ್ಯಾ ಬನ್ನೂರುಮಠರ ನೇಮಕಕ್ಕೇ ಅಸ್ತು ಅನ್ನದಿರಲು 'ಅಕ್ರಮ ಸೈಟ್ ವಿವಾದ' ಕಾರಣವಲ್ಲ, ಅದಕ್ಕೆ ಬೇರೆಯದೇ ಕಾರಣ ಇದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಜನವರಿ 21ರಂದು ಘೋಷಿಸಿದಾಗಲೇ ನ್ಯಾ ಬನ್ನೂರುಮಠರು ಕೈಚೆಲ್ಲಲು ನಿರ್ಧರಿಸಿದ್ದರು. ಆದರೆ ಹಿತೈಷಿಗಳ ಒತ್ತಾಸೆಯಿಂದ ಸುಮ್ಮನಾಗಿದ್ದರು.
ಆದರೆ ಕೊನೆಗೆ ಮಹತ್ವದ ಲೋಕಾಯುಕ್ತ ಪೀಠವೇರಲು ನ್ಯಾಯಮೂರ್ತಿ ಸಮೀನ್‌ದಾರ್ ರುದ್ರಯ್ಯ ಬನ್ನೂರುಮಠ ಅವರ ಹೆಸರನ್ನು ಕೈಬಿಡುವ ನಿಟ್ಟಿನಲ್ಲಿ ಅಂತಿಮ ಮೊಳೆ ಹೊಡೆದಿದ್ದು ಮಾತ್ರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರು.
CJ ವಿಕ್ರಮಜಿತ್ ಅವರು ಕಳೆದ ವಾರ ಏನು ಮಾಡಿದರು ಅಂದರೆ ನೇರವಾಗಿ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಪತ್ರ ಬರೆದು, ಬನ್ನೂರಮಠ ಅವರ ನೇಮಕಕ್ಕೆ ಸಂಬಂಧಿಸಿದಂತೆ ತಾವು ನೀಡಿದ್ದ ಶಿಫಾರಸು ಪತ್ರವನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಇದನ್ನು ಅರಿತ ಬನ್ನೂರಮಠರು ಮತ್ತೆ ಮುಖಭಂಗವಾಗುವುದು ಬೇಡವೆಂದು ಅನಿವಾರ್ಯವಾಗಿ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.












Click it and Unblock the Notifications