49 ಗಣಿ ಕಂಪನಿ ಲೈಸನ್ಸ್ ರದ್ದು: ಸಿಇಸಿ ಶಿಫಾರಸು

ಸಿಇಸಿ ತಂಡ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಜ್ಯದಲ್ಲಿ ಗಣಿ ಸಮೀಕ್ಷೆ ನಡೆಸಿ ನೀಡಿರುವ ವರದಿಯ ಮುಖ್ಯಾಂಶಗಳು ಕೆಳಗಿನಂತಿದೆ:
* ವರ್ಷಕ್ಕೆ 30 ಮಿಲಿಯನ್ ಮೆಟ್ರಿಕ್ ಟನ್ ಗಣಿಗಾರಿಕೆಗೆ ಮಾತ್ರ ಅನುಮತಿ.
* ಅತಿಯಾದ ಗಣಿಗಾರಿಕೆಯಲ್ಲಿ ತೊಡಗಿದ್ದ 49 ಕಂಪನಿ ಲೈಸನ್ಸ್ ರದ್ದಿಗೆ ಶಿಫಾರಸು
* ಲೈಸನ್ ಉಲ್ಲಂಘಿಸಿರುವ ಕಂಪನಿಗಳು ವಾರ್ಷಿಕವಾಗಿ 10 ಮಿಲಿಯನ್ ಟನ್ ಕಬ್ಬಿಣ ಅದಿರು ಉತ್ಪಾದನೆ ಸಾಮರ್ಥ್ಯ ಹೊಂದಿದೆ.
* 22 ಕಂಪನಿಗಳ ಗಣಿಗಾರಿಕೆ ಪುನರಾರಂಭಕ್ಕೆ ಸೂಚನೆ. ಈ ಸಂಖ್ಯೆ 45 ಸಾಧ್ಯತೆಯೂ ಇದೆ.
* ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ ನಿರ್ಬಂಧಿತ ಕಬ್ಬಿಣದ ಅದಿರು ಗಣಿಗಾರಿಕೆಗೆ ಅವಕಾಶ ನೀಡಬಹುದು.
* ಬಳ್ಳಾರಿಯಲ್ಲಿ 25 ಮಿಲಿಯನ್ ಮೆಟ್ರಿಕ್ ಟನ್, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ 5 ಮಿಲಿಯನ್ ಮೆಟ್ರಿಕ್ ಟನ್ ಗೆ ಅನುಮರಿ
*72 ಕಂಪನಿಗಳಿಗೆ ದಂಡ, 21 ಕಂಪನಿಗಳಿಗೆ ಪರಿಸರ ರಕ್ಷಣೆ ಯೋಜನೆ ಅನುಗುಣವಾಗಿ ಮಾರ್ಪಾಟು ಮಾಡಲು ಸೂಚನೆ
* ಕರ್ನಾಟಕ ಹಾಗೂ ಆಂಧ್ರಪ್ರದೇಶ ನಡುವೆ ಹೊಸದಾಗಿ ಗಡಿ ರೇಖೆ ಗುರುತಿಸುವವರೆಗೂ 7 ಕಂಪನಿಗಳು ಗಣಿಗಾರಿಕೆ ನಡೆಸುವಂತಿಲ್ಲ.
* ನಿಗದಿತ ಗಣಿ ಪ್ರದೇಶ ಉಲ್ಲಂಘಿಸಿ ಗಣಿಗಾರಿಕೆ ನಡೆಸಿದರೆ 5 ಕೋಟಿ ದಂಡ.
* ಗಣಿಗಾರಿಕೆಯಿಂದ ರಸ್ತೆ ಹಾಳುಗೆಡವಿದರೆ 1 ಕೋಟಿ ರು ದಂಡ.
ಆದರೆ, ಆರ್ಸೆಲರ್ ಮಿತ್ತಲ್, ಪೋಸ್ಕೋದಂಥ ದೊಡ್ಡ ಕಂಪನಿಗಳು ಸೇರಿದಂತೆ ಎನ್ ಎಂಡಿಸಿ, ಭೂಷಣ್, ಟಾಟಾಮೆಟಾಲಿಂಕ್ಸ್,ಅಧುನಿಕ್ ಹಾಗೂ ಕಿರ್ಲೋಸ್ಕರ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಕರ್ನಾಟಕ ಸರ್ಕಾರಕ್ಕೆ ಸಿಇಸಿ ವರದಿ, ಹಿತಕರವಾಗೇನೂ ಇಲ್ಲ.
ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿರುವ ಮಾತಾ ಮಿನಿರಲ್ಸ್, ಆದರ್ಶ ಎಂಟರ್ ಪ್ರೈಸಸ್, ಅಂಬಿಕಾ ಗಣಿ ಕಂಪನಿಯಿಂದ ಹೆಚ್ಚಿನ ಅಕ್ರಮಗಳು ನಡೆದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.












Click it and Unblock the Notifications