ರವಿ ಬೆಳಗರೆ ಅಂಗಡಿ, ಪುಸ್ತಕ, ವೆಬ್ ಸೈಟ್ ಲೈವ್

4.30 ರ ವೇಳೆಗೆ ಬೆಂಗಳೂರಿನ ಗಾಂಧಿಬಜಾರ್ ಟ್ಯಾಗೋರ್ ಸರ್ಕಲ್ ನಿಮ್ದ ನಾಡಿನ ಗಣ್ಯ ಲೇಖಕರು, ಕಲಾವಿದರು ಹಾಗೂ ನಟರು ಮೆರವಣಿಗೆ ಹೊರಟು ಗಾಂಧಿ ಬಜಾರ್ ಸರ್ಕಲ್ ದಾಟಿ ರೋಟಿ ಘರ್ ಬಳಿ ಇರುವ 'ಬೆಳೆಗೆರೆ ಬುಕ್ಸ್ ಅಂಡ್ ಕಾಫಿ(BBC) ತಲುಪಲಿದ್ದಾರೆ.
ಕವಿ ಎಚ್ ಎಸ್ ವೆಂಕಟೇಶಮೂರ್ತಿ, ಡಾ, ಪ್ರಧಾನ ಗುರುದತ್ತ, ದೊಡ್ಡ ರಂಗೇಗೌಡ, ಭುವನೇಶ್ವರಿ ಹೆಗಡೆ, ಮಾಳವಿಕಾ, ಅವಿನಾಶ್, ಟಿ.ಎನ್ ಸೀತಾರಾಮ್, ಬೆಳೆಗೆರೆ ಕೃಷ್ಣಶಾಸ್ತ್ರಿ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
6 ಗಂಟೆಗೆ ಪದ್ಮನಾಭನಗರ 12 ಬಿ ಬಸ್ ನಿಲ್ದಾಣ ಬಳಿ ಇರುವ ಅಟಲ್ ಬಿಹಾರಿ ವಾಜಪೇಯಿ ರಂಗಮಂದಿರದಲ್ಲಿ ರವಿ ಬೆಳೆಗೆರೆ ಅವರ 'ಹಿಮಾಗ್ನಿ, 'ಅಮ್ಮ ಸಿಕ್ಕಿದ್ಲು', 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್' ಹಾಗೂ ಕನಸೇ, ಒಲವೇ ಎಂಬ ಎರಡು ಧ್ವನಿಮುದ್ರಿಕೆಗಳನ್ನು ಲೋಕಾರ್ಪಣೆ ಮಾಡಲಾಗುವುದು.ಜೊತೆಗೆ ಡಾ.ಟಿ.ಎನ್ ಕೃಷ್ಣರಾಜು ಅವರ 'ಕಥೆಗಳು ಮತ್ತು ಕಾದಂಬರಿ' ಕೃತಿ ಕೂಡಾ ಬಿಡುಗಡೆಯಾಗಲಿದೆ.
ನೂತನ ವೆಬ್ ತಾಣ www.ravibelagere.com ಕೂಡಾ ಇಂದಿನಿಂದ ಚಾಲನೆಗೊಳ್ಳಲಿದ್ದು, ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷೀಸಬಹುದು.
ಕಾರ್ಯಕ್ರಮದಲ್ಲಿ ನಟ ಉಪೇಂದ್ರ, ಶ್ರೀನಗರ ಕಿಟ್ಟಿ, ರವಿಚಂದ್ರನ್, ಅಂಬರೀಷ್, ದರ್ಶನ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.












Click it and Unblock the Notifications