ಈಗ ಶೀಲಾ ದೀಕ್ಷಿತರಿಂದ ನರೇಂದ್ರ ಮೋದಿ ಭಜನೆ
ನವದೆಹಲಿ,ಫೆ.1:
ಮೊನ್ನೆ ಕಾಂಗ್ರೆಸ್ ಪಕ್ಷವೇ ನರೇಂದ್ರ ಮೋದಿ ಮತ್ತು ಗುಜರಾತ್ ಸರಕಾರವನ್ನು ಒಟ್ಟಿಟ್ಟಿಗೇ ಹಾಡಿಹೊಗಳಿತ್ತು. ಬಳಿಕ ಇಲ್ಲ ತಾನು ಹೇಳಿದ್ದು ಹಾಗಲ್ಲ ಎಂದು ನಾಲಗೆ ಕಚ್ಚಿಕೊಂಡಿತು. ಈಗ ಪಕ್ಷದ ಹಿರಿಯ ತಲೆ ಶೀಲಾ ದೀಕ್ಷಿತ್ ಮೋದಿ ಭಜನೆಯಲ್ಲಿ ತೊಡಗಿದ್ದಾರೆ. ಮೋದಿ ಆಡಳಿತದ ಗುಜರಾತಿನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಘಂಟಾಘೋಶವಾಗಿ ಹೇಳಿದ್ದಾರೆ. id="toptextpromo">ನಾನು
ಪಕ್ಷದ ಪರ ಅಥವಾ ವಿರುದ್ಧ ಮಾತನಾಡುತ್ತಿಲ್ಲ. ಗುಜರಾತ್ ಪ್ರಗತಿ ಪಥದಲ್ಲಿದೆ ಎಂಬುದು ಎರಡನೇ ಮಾತಿಲ್ಲ. ಅದರಿಂದಲೇ ಅಲ್ಲಿನ ಸರಕಾರ ಮತ್ತೆ ಮತ್ತೆ ಆರಿಸಿಬರುತ್ತಿದೆ. ಅಲ್ಲಿನ ಸರಕಾರ ಮತ್ತೆ ಮತ್ತೆ ಏಕೆ ಆಯ್ಕೆಯಾಗುತ್ತಿದೆ ಅಂದರೆ ಹಾಲಿ ಸರಕಾರದಿಂದ ಅಲ್ಲಿನ ಜನಕ್ಕೆ ತಮ್ಮ ರಾಜ್ಯದ ಪ್ರಗತಿಯ ಬಗ್ಗೆ ಖಾತರಿಯಿದೆ ಎಂದು ಸಾರ್ವಜನಿಕ ಸಭೆಯಲ್ಲಿಯೇ ಶೀಲಾ ಹಾಡಿಹೊಗಳಿದರು. id='are-slot-1' class='oiad oi-axt oiadv'> id='top-searched-articles'>ಪಕ್ಷಕ್ಕೆ
ಇದರಿಂದ ಮುಜುಗುರವಾಗಿ ಟೀಕಾಸ್ತ್ರಗಳು ತಮ್ಮತ್ತ ತೂರುಬರುತ್ತಿವೆ ಎಂಬುದನ್ನು ಅರಿತ ಶೀಲಾ ಅವರು ತಕ್ಷಣ ಹೇಳಿಕೆ ನೀಡಿ, ತಾವು ಯಾವುದೇ ಒಬ್ಬ ವ್ಯಕ್ತಿಯ ಭಜನೆ ಮಾಡಲಿಲ್ಲ. ಬದಲಿಗೆ ನಿಜಕ್ಕೂ ಪ್ರಗತಿ ಪಥದಲ್ಲಿರುವ ಸರಕಾರವನ್ನು ಪ್ರಶಂಶಿಸಿದ್ದೇನೆ ಎಂದಿದ್ದಾರೆ. ದಾಖಲಾರ್ಹ ಸಂಗತಿಯೆಂದರೆ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಸತತವಾಗಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ.











Click it and Unblock the Notifications