• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಣರಾಜ್ಯೋತ್ಸವ ಪರೇಡ್ : ಭೂತಕೋಲ ಸ್ತಬ್ದಚಿತ್ರಕ್ಕೆ ಬಹುಮಾನ

By Prasad
|
ನವದೆಹಲಿ, ಜ. 31 : 63ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ದಕ್ಷಿಣದ ಭಾರತದ ಏಕೈಕ ತಂಡವಾಗಿ ಆಯ್ಕೆಯಾಗಿ, ಜ.26ರಂದು ನೆರೆದಿದ್ದ ಸಹಸ್ರಾರು ಜನರ ಮನಗೆದ್ದಿದ್ದ ಕರ್ನಾಟಕದ ಭೂತಾರಾಧನೆ (ಭೂತಕೋಲ) ಸ್ತಬ್ದ ಚಿತ್ರ ಮೂರನೇ ಸ್ಥಾನ ಗಳಿಸಿದೆ.

ಮಂಗಳವಾರ, ಜ. 31ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ವಾರ್ತಾ ಇಲಾಖೆಯ ನಿರ್ದೇಶಕ ಕೆ.ಎಸ್. ಬೇವಿನಮರದ ಅವರು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಕಳೆದ ವರ್ಷ ಕರ್ನಾಟಕ ಪ್ರದರ್ಶಿಸಿದ 8ನೇ ಶತಮಾನದ ಪಟ್ಟದಕಲ್ಲು ದೇಗುಲ ಟ್ಯಾಬ್ಲೊ ಎರಡನೇ ಬಹುಮಾನ ಪಡೆದಿತ್ತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ, ನಂಬಿಕೆ, ಆಚರಣೆ, ಪರಂಪರೆ ಮತ್ತು ಸಂಸ್ಕೃತಿಯ ಭಾಗವಾಗಿರುವ ಭೂತಕೋಲ ವೇಷ ತೊಟ್ಟಿದ್ದ 55 ಕಲಾವಿದರು ದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕುಣಿದಿದ್ದರು, ಕರ್ನಾಟಕದ ಈ ಅದ್ಭುತ ಕಲೆಯನ್ನು ಉತ್ತರ ಭಾರತದಲ್ಲಿ ಪ್ರದರ್ಶಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಗಣರಾಜ್ಯೋತ್ಸವ ಸುದ್ದಿಗಳುView All

English summary
Karnataka Bhoota Aradhane or Bhoota Kola tableau, which was the lonely participant from South India to have participated in the 63rd Republic Day parade has bagged third prize. Director, Department of information K S Bevinamarada, received prize from the Union defence minister A K Antony in New Delhi on January 31, 2012.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more