ಹಯ್ಯಾಳ ಹಳ್ಳಿಯಲ್ಲಿ ನಾಯಿ ಹಾವಳಿ, 10 ಮಕ್ಕಳಿಗೆ ಗಾಯ
ಯಾದಗಿರಿ,
ಜ. 31 : ಜಿಲ್ಲೆಯ ಶಹಾಪುರ ತಾಲೂಕಿನ ಹಯ್ಯಾಳ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮಕ್ಕಳು ನಾಯಿ ಕಡಿತಕ್ಕೆ ಒಳಗಾದ ಘಟನೆ ಸೋಮವಾರ ನಡೆದಿದೆ. ಕಡಿತಕ್ಕೊಳಗಾದ ಮಕ್ಕಳು ಥರಗುಟ್ಟುತ್ತಿದ್ದರು. ಏಕಾಏಕಿ ನಡೆದ ಈ ಘಟನೆಯಿಂದಾಗಿ ಪಾಲಕರು ಕೂಡ ಗಾಬರಿಗೊಂಡಿದ್ದಾರೆ. id="toptextpromo">ಮಕ್ಕಳನ್ನು
ಮನೆಯ ಹತ್ತಿರ ಆಟವಾಡಲು ಬಿಟ್ಟು ಪಾಲಕರು ಹೊಲಕ್ಕೆ ತೆರಳಿದ ಸಂದರ್ಭದಲ್ಲಿ ನಾಯಿ ಮಕ್ಕಳನ್ನು ಕಡಿದಿದೆ. ಕಡಿತಕ್ಕೆ ಒಳಗಾದ ಮಕ್ಕಳಿಗೆ ಸಮಿಪದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಪಾಲಕರು ಭಯ ಪಡಬೇಕಿಲ್ಲ ಎಂದು ಡಾ.ಗಂಗಾಧರ ಚಟ್ರಕಿ ಅವರು ಪಾಲಕರಿಗೆ ಸಾಂತ್ವನ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮಕ್ಕಳನ್ನು
ಆಟಕ್ಕೆ ಬಿಟ್ಟು ನಿರಾತಂಕವಾಗಿ ಹೊಲಗಳಿಗೆ ಕೆಲಸಕ್ಕಾಗಿ ಹೋಗುತ್ತಿದ್ದ ಗ್ರಾಮಸ್ಥರನ್ನು ಈ ಘಟನೆ ಆತಂಕಕ್ಕೀಡು ಮಾಡಿದೆ. ಸದ್ಯಕ್ಕೆ ಗ್ರಾಮಸ್ಥರು ಆ ನಾಯಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.











Click it and Unblock the Notifications