ರೆಡ್ಡಿ ಆಸ್ತಿ ಜಾಲಾಡಲು ಬೆಂಗಳೂರಿಗೆ ಇಂದು ಸಿಬಿಐ ತಂಡ

cbi-to-inspect-gali-reddy-properties-bangalore-jan30
ಬಳ್ಳಾರಿ, ಜ.30: ಶತಾಯಗತಾಯ ಜನಾರ್ದನ ರೆಡ್ಡಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡುವ ಹಪಾಹಪಿಗೆ ಬಿದ್ದಿರುವ ಸಿಬಿಐ, ರೆಡ್ಡಿ ವಿರುದ್ಧ 2ನೆ ಚಾರ್ಜ್ ಶೀಟ್ ದಾಖಲಿಸಿ, ಅವರಿಗೆ ಜಾಮೀನು ಸಿಗದಂತೆ ಮಾಡುವ ಇರಾದೆ ಹೊಂದಿದೆ. ಈ ನಿಟ್ಟಿನಲ್ಲಿ, ಓಬಳಾಪುರಂ ಅಕ್ರಮ ಗಣಿಗಾರಿಕೆ ಅಕ್ರಮವನ್ನು ಪತ್ತೆ ಹಚ್ಚಲು ಸದ್ಯದಲ್ಲೇ ತನ್ನ ದಂಡೊಂದನ್ನು ಮಾರಿಷಸ್ ಹಾಗೂ ವರ್ಜನ್ ದ್ವೀಪಗಳಿಗೆ ಕಳಿಸಿಕೊಡಲಿದೆ.

ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಮಾಲೀಕತ್ವದ ಸಂಸ್ಥೆಗಳು ವಿದೇಶಗಳಿಗೆ ಅಕ್ರಮವಾಗಿ ವರ್ಗಾಯಿಸಿರುವ ಭಾರಿ ಪ್ರಮಾಣದ ಹಣವನ್ನು ಪತ್ತೆ ಹಚ್ಚಲು ಫೆಬ್ರವರಿ ಮೊದಲ ವಾರ ಕೆಲವು ವಿದೇಶಗಳಿಗೆ ಈ ಸಿಬಿಐ ತಂಡ ಭೇಟಿ ನೀಡಲಿದೆ. ರೆಡ್ಡಿ ಹಾಗೂ ಅವರ ಸಹೋದರರು ಮಾರಿಷಸ್ ಹಾಗೂ ವರ್ಜಿನ್ ದ್ವೀಪ ಸಹಿತ ವಿದೇಶಗಳಲ್ಲಿ 6 ಕಂಪನಿಗಳನ್ನು ಹೊಂದಿದ್ದಾರೆಂದು ಸಿಬಿಐ ತನಿಖೆಯಿಂದ ತಿಳಿದು ಬಂದಿದೆ. ಕಬ್ಬಿಣದ ಅದಿರು ರಫ್ತಿಗಾಗಿ ಚೀನಾದ ಸಂಸ್ಥೆಗಳು ಪಾವತಿಸಿದ ಹಣವನ್ನು ಈ ಕಂಪನಿಗಳಿಗೆ ವರ್ಗಾಯಿಸಲಾಗಿದೆ.

ರೆಡ್ಡಿ ಆಸ್ತಿ ಜಾಲಾಡಲು ಬೆಂಗಳೂರಿಗೆ ಸಿಬಿಐ ತಂಡ: ಈ ಮಧ್ಯೆ, ಸೆಪ್ಟೆಂಬರಿನಲ್ಲಿ ರೆಡ್ಡಿಯನ್ನು ಬಂಧಿಸಿದ ವೇಳೆ ಸಿಬಿಐ ತಂಡ ಬೆಂಗಳೂರಿನಲ್ಲಿಯೂ ರೆಡ್ಡಿಗೆ ಸೇರಿದ ಆಸ್ತಿಪಾಸ್ತಿಯನ್ನು ಜಪ್ತಿ ಮಾಡಿತ್ತು. ಜತೆಗೆ ಬಳ್ಳಾರಿಯಲ್ಲಿ ವಶಪಡಿಸಿಕೊಂಡಿದ್ದ ರೆಡ್ಡಿಯ ರುಕ್ಮಿಣಿ ಹೆಲಿಕಾಪ್ಟರ್ ಅನ್ನು ಯಲಹಂಕದಲ್ಲಿರುವ ಡೆಕ್ಕನ್ ವಾಯುಯಾನ ಸಂಸ್ಥೆಯ ಸುಪರ್ದಿಗೆ ಒಪ್ಪಿಸಿತ್ತು. ಇವರೆಡನ್ನು ಕೋರ್ಟ್ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲಿಸಲು ಸಿಬಿಐ ತಂಡ ಇಂದು (ಜನವರಿ 30) ಬೆಂಗಳೂರಿಗೆ ಆಗಮಿಸಲಿದೆ. ಸಿಬಿಐ ಹೈದ್ರಾಬಾದ್‌ ಬ್ರಾಂಚಿನ ಹೆಚ್ಚುವರಿ ಎಸ್ಪಿ ಆರ್‌.ಎಂ. ಖಾನ್‌ ಮತ್ತು ನ್ಯಾಯಾಲಯದ ಸಿಬ್ಬಂದಿ ಲಕ್ಷ್ಮೀ ರೆಡ್ಡಿ ಮೊದಲಾದ ಅಧಿಕಾರಿಗಳು ತಂಡದಲ್ಲಿದ್ದಾರೆ.

ಬಳ್ಳಾರಿಯಲ್ಲಿ ಜಾಲಾಡಿದ ಸಿಬಿಐ: ಈ ಮಧ್ಯೆ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸಿ ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿದ ಹೈದರಾಬಾದ್‌ ಸಿಬಿಐನ ಅಧಿಕಾರಿಗಳ ತಂಡ ಸತತ ಎರಡನೇ ದಿನವೂ (ಭಾನುವಾರ) ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ನಿವಾಸದಲ್ಲಿ ಪರಿಶೀಲನೆ ನಡೆಸಿತು. ರೆಡ್ಡಿ ವಿರುದ್ಧ ಚಾರ್ಜಶೀಟ್‌ನಲ್ಲಿ ಹೆಸರಿಸಲಾಗಿರುವ ಆಸ್ತಿ ಪಾಸ್ತಿಗಳ ಕುರಿತು ಮತ್ತಷ್ಟು ವಿವರಗಳನ್ನು ತಂಡ ಪಡೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+