ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಮೇಲುಗೈ: ಭಾರದ್ವಾಜ್ ಗೆ ಮುಖಭಂಗ

By Srinath
|
Google Oneindia Kannada News

bhadra-project-clean-chit-to-bsy-bhardwaj-at-fault
ಬೆಂಗಳೂರು, ಜ.30: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಕಾನೂನು ಇಕ್ಕಟ್ಟಿಗೆ ಸಿಲುಕಿಸುವ ಭರದಲ್ಲಿ ರಾಜ್ಯಪಾಲ ಭಾರದ್ವಾಜ್ ಅವರು ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ತಂದಿದ್ದ ದೂರಿಗೆ ಕಣ್ಣುಮುಚ್ಚಿಕೊಂಡು ಸಹಿ ಹಾಕಿದರಾ? ಎಂಬ ಪ್ರಶ್ನೆ ಕಾಡತೊಡಗಿದೆ.

'ದೂರಿನಲ್ಲಿ ಬೇಳೆ ಕಾಳು ಏನೂ ಇಲ್ಲ. ಅಸಲಿಗೆ ಇದರಲ್ಲಿ ಯಡಿಯೂರಪ್ಪಗೆ ಒಂದು ನಯಾಪೈಸೆ ಲಂಚ ತಲುಪಿಲ್ಲ. ಸುಮ್ನೆ. ಸುಮ್ ಸುಮ್ನೆ ಅವರ ಹೆಸರನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ'ಎಂದು ಲೋಕ ಪೊಲೀಸರು ಬಿ ರಿಪೋರ್ಟ್ ಹಾಕಿ, ಕೈತೊಳೆದುಕೊಂಡಿದ್ದಾರೆ.

ಇದರಿಂದಾಗಿ, 'ಭದ್ರಾ ಮೇಲ್ದಂಡೆ ಯೋಜನೆ ಅಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾಗಿದ್ದಾರೆ. ಬೆಂಗಳೂರು ಲೋಕಾಯುಕ್ತ ಪೊಲೀಸರು ಅವರ ವಿರುದ್ಧ ತನಿಖೆ ನಡೆಸಲಿ. ತಾವು ತಥಾಸ್ತು ಅನ್ನಿ' ಎಂದು ದತ್ತಾ ಕೇಳಿದ್ದೇ ತಡ. ಯಡ್ಡಿ ವಿರುದ್ಧ ರಣೋತ್ಸಾಹದಲ್ಲಿದ್ದ ಭಾರದ್ವಾಜ್ ಸಾಹೇಬರು ಒಪ್ಪಿಗೆಯ ಮುದ್ರೆ ಒತ್ತೇ ಬಿಟ್ಟರಾ? ದೂರಿನ ಸಾರವೇನು? ಅದರಲ್ಲಿ ಎಷ್ಟು ನಿಜಾಂಶವಿದೆ. ದೂರಿನ ಒಳಸುಳಿ ಏನು? ಎಂದು ಒಂಚೂರು ಕಣ್ಣಾಡಿಸದೆ ಸಾಹೇಬರು ದತ್ತಾಗೆ ಗೋ ಅಹೆಡ್ ಅಂದುಬಿಟ್ರಾ? ಎಂದು ಜನ ಅದರಲ್ಲೂ ಯಡಿಯೂರಪ್ಪ ಕಟ್ಟಾಭಿಮಾನಿಗಳು ಒಂದೇ ಸಮನೆ ಕೇಳತೊಡಗಿದ್ದಾರೆ.

English summary
In Bhadra Upper Project case Karnataka ex Chief Minister B.S. Yeddyurappa has got a clean chit from the Lokayukta police over his role in the Upper Bhadra Irrigation Project tender process. But was Governor Bhardwaj at fault in granting a sanction to go ahead ti YSV Datta to register the case agaisnt BSY.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X