ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಚನ ಸಾಹಿತ್ಯ ಹರಿಕಾರ ಬಸವರಾಜುಗೆ ನಮನ

By Mahesh
|
Google Oneindia Kannada News

Prof L Basavaraju demise
ಮೈಸೂರು, ಜ.30: ಹಿರಿಯ ಸಾಹಿತಿ ಲಿಂಗಪ್ಪ ಬಸವರಾಜು (93) ಭಾನುವಾರ ರಾತ್ರಿ ಇಲ್ಲಿ ಸ್ವಗೃಹದಲ್ಲಿ ನಿಧನರಾದರು. ಚಿತ್ರದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಂಶೋಧನೆಯ ಜೊತೆಗೆ ಸೃಜನಶೀಲ ಸಾಹಿತ್ಯ ರಚನೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು ಎಲ್ ಬಸವರಾಜು.

ವಚನ ಸಾಹಿತ್ಯ, ವೀರಶೈವ ಧರ್ಮದ ಬಗ್ಗೆ ಅಧಿಕಾರಯುತವಾಗಿ, ಆಧಾರಗಳ ಸಮೇತ ವಿವರಿಸಬಲ್ಲ ದಣಿಯದ ಜೀವ ಎಲ್ ಬಿ, ಮನಸ್ಸು ಎಷ್ಟು ಮೃದುವೋ ವಿಷಯ ಪ್ರತಿಪಾದನೆಯಲ್ಲಿ ಅಷ್ಟೇ ಕಠಿಣ. ಕವಿ ಮನಸ್ಸು, ಬಂಡಾಯಗಾರರ ಛಲ ಅವರ ಗುಣವಾಗಿತ್ತು.

ಬಸವರಾಜು ಅವರ ಜನನ, ವಿದ್ಯಾಭ್ಯಾಸ : ಕೋಲಾರ ಜಿಲ್ಲೆಯ ಎಡಗೂರಿನಲ್ಲಿ 1919 ಅಕ್ಟೋಬರ್ 5 ರಂದು ಬಸವರಾಜು ಅವರು ಜನಿಸಿದರು. ಇವರ ತಾಯಿ ವೀರಮ್ಮ, ತಂದೆ ಲಿಂಗಪ್ಪ. ಎಡಗೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ತುಮಕೂರಿನ ಸಿದ್ಧಗಂಗೆಯಲ್ಲಿ ಪ್ರೌಢಶಿಕ್ಷಣ ಮುಗಿಸಿದರು.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ಮತ್ತು ಮೈಸೂರು ವಿವಿಯಲ್ಲಿ ಎಂಎ ಪದವಿ ಗಳಿಸಿದರು. ಮೂರು ದಶಕಗಳಿಗೂ ಹೆಚ್ಚು ಕಾಲ ಮೈಸೂರು ವಿವಿಯ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅಪಾರ ಶಿಷ್ಯವರ್ಗವನ್ನು ಸಂಪಾದಿಸಿದರು.

ಪ್ರಶಸ್ತಿ, ಪುರಸ್ಕಾರ : ಎಲ್ ಬಿ ಅವರಿಗೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪ್ರೊ. ಸಂ. ಶಿ. ಭೂಸನೂರ ಮಠ ಪ್ರಶಸ್ತಿ, ಪಂಪ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಬಸವ ಪುರಸ್ಕಾರ ರಾಷ್ಟ್ರೀಯ ಸಮ್ಮಾನ, ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾ ಸಮ್ಮಾನ, ರಾಷ್ಟ್ರಕವಿ ಎಂ ಗೋವಿಂದ ಪೈ ಪ್ರಶಸ್ತಿ, ಮೈಸೂರು ವಿವಿಯ ಗೌರವ ಡಾಕ್ಟರೇಟ್ ಇತ್ಯಾದಿ.

ಸಾಹಿತ್ಯ ಕೃತಿಗಳು : ನಾಟಕಾಮೃತ ಬಿಂದುಗಳು, ಭಾರತ ರೂಪಕ, ರಾಮಾಯಣ ನಾಟಕ ತ್ರಿವೇಣಿ, ಅಲ್ಲಮನ ವಚನ ಚಂದ್ರಿಕೆ, ಅಲ್ಲಮನ ವಚನಗಳು, ಬಸವಣ್ಣನವರ ವಚನಗಳು, ಸರ್ವಜ್ಞನ ವಚನಗಳು, ಅಕ್ಕನ ವಚನಗಳು, ದೇವರದಾಸಿಮಯ್ಯ ವಚನಗಳು, ಬಸವ ವಚನಾಮೃತ, ಪರಮಾರ್ಥ, ಶಿವದಾಸ ಗೀತಾಂಜಲಿ, ತಿರುಮಲಾರ್ಯ ಮತ್ತು ಚಿಕ್ಕದೇವರಾಜ ಒಡೆಯರು, ಶೃಂಗಾರ ನಿದರ್ಶನ, ಮಹಾದೇವನ ಮಹಾಲಿಂಗೇಂದ್ರ ವಿಜಯ, ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯ ಸಂಪಾದನೆ, ವೀರಶೈವ ತತ್ವ ಮತ್ತು ಆಚರಣೆ, ಕನ್ನಡ ಛಂದಸ್ಸಂಪುಟ, ಪಂಪನ ಆದಿ ಪುರಾಣ, ವಚನ ಚಿಂತನ, ಕಲುಬುರ್ಗಿಯ ಶರಣಬಸವ, ತೊರವೆ ರಾಮಾಯಣ ಸಂಗ್ರಹ, ಹರಹರನು ಕಂಡ ಜ್ಯೋತಿರ್ಲಿಂಗದ ಮೂರು ಮುಖಗಳು, ಶಬ್ದಮಣಿದರ್ಪಣ, ಶರಣ ಬಸವ ಸಂಪುಟ ಹಾಗೂ ಮುಂತಾದವು.

'ಕಲಿಯುವವರೆ ಕಲಿಸಲು ಯೋಗ್ಯರು', ಮಾನವ ಜಾತಿ ತಾನೊಂದೇ ವಲಂ'ಎಂಬುದರಲ್ಲಿ ನಂಬಿಕೆಯಿಟ್ಟಿದ್ದ 93 ರ ಹರೆಯ ಜ್ಞಾನವೃದ್ಧ ಎಲ್ ಬಿ ಅವರ ಚಿಂತನೆಗಳು ಸದಾ ಅನುಕರಣೀಯ.

English summary
Prof L Basavaraju passed away last night(Jan.30) in Mysore. He was 94. Basavaraju was scholar in Vachana Sahitya and was 75th sahitya sammelana President.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X