ಕೋಲಾರದಲ್ಲಿ ಸಾರ್ವಜನಿಕರ ಮೇಲೆ ಲಾಠಿ ನರ್ತನ

Road widening sparks protest in Kolar
ಕೋಲಾರ, ಜ. 28 : ಕೋಲಾರ ನಗರದ ಪ್ರಮುಖ ರಸ್ತೆಯಾದ ಎಂಬಿ ರಸ್ತೆ ತೆರವು ಕಾರ್ಯಚರಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಾಗು ಪೊಲೀಸರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು, ಅಡ್ಡಪಡಿಸಲು ಯತ್ನಿಸಿದ ಸಾರ್ವಜನಿಕರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಶನಿವಾರ ನಡೆದಿದೆ.

ಕೋಲಾರ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 7 ರಸ್ತೆಯಾದ ಎಂಬಿ ರಸ್ತೆಯನ್ನು ಈಗ್ಗೆ 5 ವರ್ಷಗಳ ಹಿಂದೆ ಅಂದಿನ ಶಾಸಕ ಶ್ರೀನಿವಾಸಗೌಡರ ಶಿಫಾರಸಿನಂತೆ ಎರಡು ಭಾಗದಲ್ಲಿ 10 ಮೀಟರ್ ತೆರವುಗೊಳಿಸಲಾಗಿತ್ತು. ಅಂದು ಕ್ಲಾಕ್ ಟವರ್ ನಿಂದ ಕೆಎಸ್ ಆರ್ಟಿಸಿ ಬಸ್ ನಿಲ್ದಾಣದರೆಗೂ ಸಾರ್ವಜನಿಕರೆ ಖುದ್ದು ತೆರವು ಗೊಳಿಸಿಕೊಂಡಿದ್ದರು.

ಅಮ್ಮವಾರಿಪೇಟೆ ವೃತ್ತದಿಂದ ಖಾಸಗಿ ಬಸ್ ನಿಲ್ದಾಣದವರಿಗೂ ತೆರವು ಆಗದೆ ಉಳಿದಿತ್ತು. ಈ ಬಗ್ಗೆ ಸಾರ್ವಜನಿಕರಿಂದಲೂ ಟೀಕೆ ಬರುತಿತ್ತು. ನಂತರದಲ್ಲಿ ಇಂದು ನಾಳೆ ಎಂದು ಮೂಂದೂಡಲಾಗುತ್ತಿದ್ದ ಕಾರ್ಯ ಇಂದು ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಜಂಟಿಯಾಗಿ ಜೆಸಿಬಿಗಳನ್ನು ಕರೆತಂದು ಕಾರ್ಯಚರಣೆಗಿಳಿಯಿತು.

ಅಧಿಕಾರಿಗಳು ಕಟ್ಟಡಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿಕೊಂಡು ಅಮ್ಮವಾರಿ ಪೇಟೆ ಬಳಿಬಂದಾಗ, ಅಲ್ಲಿ ಅಕ್ಕಪಕ್ಕದಲ್ಲಿದ್ದ ಗಂಗಮ್ಮ ಗುಡಿ ಹಾಗು ಮತ್ತೊಂದು ಕೋಮಿನ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಒಂದು ಕೋಮಿನ ಜನ ಪ್ರತಿರೋಧ ಒಡ್ಡಿದ್ದಾರೆ ಮತ್ತು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ.

ಗುಂಪು ಕೂಡಿಕೊಂಡು ಬಂದ ಒಂದು ಕೋಮಿನ ಜನರ ಜೊತೆ ಮಾತಿನ ಚಕಮಕಿ ನಡೆದು, ಗುಂಪನ್ನು ಚೆದುರಿಸಲು ಪೊಲೀಸರು ಲಾಠಿ ಬಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟು ಸಿಆರ್ಪಿಸಿ ಸೆಕ್ಷನ್ 144 ಅಡಿಯಲ್ಲಿ ಜಾರಿ ಜಾರಿ ಮಾಡಿದ್ದರು. ಜನರನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತಂದನಂತರ ಈಗ ಶಾಂತಮಯ ವಾತಾವರಣ ನೆಲೆಸಿದೆ ಎಂದು ಸಹಾಯಕ ಪೋಲಿಸ್ ವರಿಷ್ಠಾಧಿಕಾರಿ ಭಗವಾನದಾಸ್ ಹಾಗು ಸಹಾಯಕ ಕಮೀಷನರ್ ಪದ್ದಪ್ಪಯ್ಯ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+