ಸಿಂದಗಿ ಮತ್ತೆ ಸುದ್ದಿಗೆ: ವಿದ್ಯಾರ್ಥಿ ಆತ್ಮಹತ್ಯೆ
ಸಿಂದಗಿ
(ಬಿಜಾಪುರ ಜಿಲ್ಲೆ),ಜ.28: ಸಿಂದಗಿ ಮತ್ತೆ ಸುದ್ದಿಗೆ ಬಂದಿದೆ. ಮೊನ್ನೆಯಷ್ಟೇ ಇಲ್ಲಿನ ಕೆಲ ವಿದ್ಯಾರ್ಥಿಗಳು ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿದ್ದರು. ಈಗ ಅದೊಂದು ದೇಶಪ್ರೇಮ ಮೆರೆದಿರುವ ಹದಿನೆಂಟರ ಪದವಿ ವಿದ್ಯಾರ್ಥಿಯೊಬ್ಬ ಶನಿವಾರ ಬೆಳಗ್ಗೆ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. id="toptextpromo">ಸಿಂದಗಿಯ
ಆರ್ ಬಿ ಪಾಟೀಲ್ ಕಾಲೇಜಿನ ಪ್ರಥಮ ವರ್ಷದ ಬಿಎ ವಿದ್ಯಾರ್ಥಿ ಶಿವಪುತ್ರ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಇಂದು ಬೆಳಗ್ಗೆ ಕಾಲೇಜು ಆವರಣದಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಈತನ
ಮೃತದೇಹದ ಬಳಿ ಡೆತ್‌ನೋಟ್ ಲಭಿಸಿದ್ದು, ಅದರಲ್ಲಿ ದೇಶದ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದಾನೆ. ಹಾಗೂ ಇದರಿಂದ ನೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಸಿಂದಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.











Click it and Unblock the Notifications