ಅವೆನ್ಯೂರಸ್ತೆಗೆ ಬಸ್ ನುಗ್ಗಿಸಿದ ಟ್ರಾಫಿಕ್ ಸಲೀಂಗೆ ಏನಾಗಿದೆ?

buses-on-avenue-road-whats-wrong-traffic-police-saleem
ಬೆಂಗಳೂರು, ಜ.28: ಬೆಂಗಳೂರು ಟ್ರಾಫಿಕ್ ಹೆಚ್ಚುವರಿ ಪೊಲೀಸ್ ಆಯುಕ್ತ ಎಂಎ ಸಲೀಂಗೆ ಏನಾಗಿದೆ!? ಅವೆನ್ಯೂ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾ? ಎಂದು ತಮ್ಮದೇ ಇಲಾಖೆಯ ಒಬ್ಬ ಸಾಮಾನ್ಯ ಪೇದೆಗೆ ಕೇಳಿದ್ದರೂ ಆತ ಅತ್ಯಂತ ಜತನದಿಂದ 'ನಖೋ ಭಾಯ್' ಎಂದು ಹೇಳುತ್ತಿದ್ದ.

ಆದರೆ ಈ ಐಎಎಸ್/ಐಪಿಎಸ್ ಗಳು ಅಂತಹವರ ಮಾತೆಲ್ಲಿ ಕೇಳುತ್ತಾರೆ. ಈ ಸಲೀಂ ಸಾಹೇಬರೂ ಅದನ್ನೇ ಮಾಡಿರುವುದು. ವಕೀಲರು ಟ್ರಾಫಿಕ್ ಜಾಮ್ ಮಾಡಿದಾಗ ಇಳಿದಿದ್ದ ಬೆವರನ್ನು ತಮ್ಮ ಎಸಿ ಕಚೇರಿಯಲ್ಲಿ ಕುಳಿತು ಒರೆಸಿಕೊಳ್ಳುತ್ತಾ ಅವೆನ್ಯೂ ರೋಡಿನಲ್ಲಿ ಇನ್ಮುಂದೆ ಬಸ್ಸುಗಳನ್ನು ಓಡಿಸಿ ಎಂದು ಬಿಎಂಟಿಸಿಗೆ ಗಾಳಿ ಹಾಕಿದ್ದಾರೆ.

ಬಿಎಂಟಿಸಿಗಾದರೂ ಬುದ್ದಿ ಬೇಡವಾ. ಅಸಲಿಗೆ ಇಲ್ಲಿ ಚಿಕ್ಕ ಸೈಕಲ್ ಹೋಗುವುದಕ್ಕೂ ಅವಕಾಶವಿಲ್ಲ ಅಂತಾದ್ದರಲ್ಲಿ ಭಾರಿ ಗಾತ್ರದ, ಬೇಜಾವಾಬ್ದಾರಿ ಡ್ರೈವರುಗಳನ್ನು ಹೊಂದಿರುವ ಬಿಎಂಟಿಸಿ ಬಸ್ಸುಗಳನ್ನು ಓಡಿಸಿದರೆ ಗತಿಯೇನು? ಪಾದಚಾರಿ ಜನ ಎಲ್ಲಿ ಹೋಗಬೇಕು. ಅಷ್ಟಕ್ಕೂ ಹಠಕ್ಕೆ ಬಿದ್ದು ಸಲೀಂ ಸಾಬ್ ಬಸ್ ಓಡಾಡಿಸುವುದೇ ಆದರೆ ಈ ರಸ್ತೆಯನ್ನು ಪಾದಚಾರಿ ಮುಕ್ತ ರಸ್ತೆಯನ್ನಾಗಿಸಲಿ.

ಅಂದರೆ 'ಯಾವ ನರಪಿಳ್ಳೆಯೂ ಅವೆನ್ಯೂ ರಸ್ತೆಯಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಅಷ್ಟಕ್ಕೂ ಹಠಕ್ಕೆ ಬಿದ್ದು ಯಾರಾದರೂ ಓಡಾಡಿದರೆ ನಾವು ಜವಾಬ್ದಾರರಲ್ಲ' ಅಂತ ರಸ್ತೆಯ ಎರಡೂ ತುದಿ, ಬದಿಗಳಲ್ಲಿ ದೊಡ್ಡದಾಗಿ ಬೋರ್ಡು ಹಾಕಿಸಿ, ಅಷ್ಟು ಮಾತ್ರದ ಪುಣ್ಯ ಕಟ್ಟಿಕೊಳ್ಳಲಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+