ಅವೆನ್ಯೂ ರಸ್ತೆ ವ್ಯಾಪಾರಿಗಳು ಕೆಂಡಾಮಂಡಲ

ಈಗ್ಗೆ 2-3 ದಶಕಗಳ ಹಿಂದೆ ಬಸ್ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಿ, ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಬೆಳಗ್ಗೆ 10ರಿಂದ ರಾತ್ರಿ 10 ರವರೆಗೂ ಗಿಜಿಗುಡುವ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಓಡಿಸಬೇಕೆಂದರೆ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ನೈಪುಣ್ಯ, ಚಾಕಚಕ್ಯತೆಯು ಸವಾರರಿಗೆ ಅನಿವಾರ್ಯ.
ಇನ್ನು ಈಗಿನ ತಲೆಮಾರಿನವರು (ಬಹುಶಃ ಸಲೀಂರನ್ನೂ ಸೇರಿಸಿಕೊಂಡು) ಅವೆನ್ಯೂ ರಸ್ತೆಯಲ್ಲಿ ಬಸ್ ಓಡಾಡಿದ್ದನ್ನೇ ನೋಡಿಲ್ಲ. ಅಂಥಾದ್ದರಲ್ಲಿ ಇದೇನಿದು ಪೊಲೀಸರ ಅವಿವೇಕದ ನಿರ್ಧಾರ?
ಇತ್ತೀಚೆಗೆ ರಸ್ತೆಯನ್ನು ಸ್ವಲ್ಪಮಟ್ಟಿಗೆ ಅಗಲೀಕರಿಸಿದಾಗಲೇ ಇಲ್ಲಿನ ವ್ಯಾಪಾರಿಗಳು ಹೈರಾಣಗೊಂಡಿದ್ದರು. ಅಂಥಾದ್ದರಲ್ಲಿ ಹಾವಿನಂತೆ ಬಳಸಿಕೊಂಡು ಹೋಗುವ ಈ ರಸ್ತೆಯಲ್ಲಿ ಯಾವ ಪುರುಷಾರ್ಥಕ್ಕಾಗಿ ಪೊಲೀಸರು ಬಸ್ ಓಡಾಟಕ್ಕೆ ಅನುಮತಿ ನೀಡುತ್ತಿದ್ದಾರೆ? ಎಂದು ಅವರು ಪ್ರಶ್ನಿಸುತ್ತಿದ್ದಾರೆ.
ಬ್ರಿಟಿಷರ ಕಾಲದಿಂದಲೂ ಅಪ್ಪಟ ವ್ಯಾಪಾರಿ ಕೇಂದ್ರವಾಗಿರುವ ಅವೆನ್ಯೂ ರಸ್ತೆಗೆ ಈಗ ನಿಜಕ್ಕೂ ಇಂತಹ ದುರ್ಗತಿ ಒದಗಬಾರದಿತ್ತು. ಟ್ರಾಫಿಕ್ ಹೆಚ್ಚು'ವರಿ' ಆಯುಕ್ತ ಎಂಎ ಸಲೀಂ ಅವರು ಸ್ವಲ್ಪ ಇತ್ತ ಯೋಚಿಸುವಂತಾಗಲಿ.












Click it and Unblock the Notifications