ಶ್ರೀಲಕ್ಷ್ಮಿಗೆ ಬೇಲ್ ಖಾತ್ರಿ, ರೆಡ್ಡಿಗೆ ಭಾರಿ ಹಿನ್ನೆಡೆ

ಈ ಮೂಲಕ ಜಾಮೀನಿಗಾಗಿ ಕಾದು ಕೂತಿರುವ ಶ್ರೀಲಕ್ಷ್ಮಿಗೆ ಸಿಬಿಐ ಸಿಹಿ ಸುದ್ದಿ ಕೊಟ್ಟಿದೆ. ಆದರೆ, ಪ್ರಕರಣದಲ್ಲಿ ದಿವಂಗತ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಹಾಗೂ ಅವರ ಆಡಳಿತದಲ್ಲಿದ್ದ ಅಧಿಕಾರಿಗಳನ್ನು ಕೂಡಾ ಅಲ್ಲಲ್ಲಿ ಹೆಸರಿಸಲಾಗಿದೆ. ಆದರೆ, ಶ್ರೀಲಕ್ಷ್ಮಿ ಹೆಸರು ಮುಖ್ಯ ಆರೋಪಿಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ಆದರೆ, ಶ್ರೀಲಕ್ಮಿ ಜೈಲುವಾಸವನ್ನು ಫೆ.21 ತನಕ ವಿಸ್ತರಿಸಲಾಗಿದ್ದು, ಫೆ.15ರೊಳಗೆ ಗಾಲಿ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶ್ರೀಲಕ್ಷ್ಮಿ ಪಾತ್ರ ಕುರಿತು ಚಾರ್ಜ್ ಶೀಟ್ ಸಲ್ಲಿಸುವಂತೆ ಸಿಬಿಐಗೆ ಸುಪ್ರೀಂಕೋರ್ಟ್ ಸೂಚಿಸಿತ್ತು.
ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶ್ರೀಲಕ್ಷ್ಮಿ ಆರೋಪಿ ನಂ.4 ಆಗಿದ್ದರು. ಇನ್ನು ಒಂದು ತಿಂಗಳ ಕಾಲ ಜೈಲಿನಲ್ಲೇ ಕಾಲ ಕಳೆಯಬೇಕಾಗಿರುವ ಲಕ್ಷ್ಮಿ ಫೆ.21ಕ್ಕೆ ಜಾಮೀನು ಪಡೆಯುವುದು ಖಾತ್ರಿಯಾಗಿದೆ. ಈ ಮಧ್ಯೆ ಜನಾರ್ದನ ರೆಡ್ಡಿ ಜಾಮೀನು ಅರ್ಜಿ ಪ್ರಕರಣವನ್ನು ನ್ಯಾ.ನಾಗಮೂರ್ತಿ ಶರ್ಮ ಮತ್ತೆ ಕೈಗೆತ್ತಿಕೊಳ್ಳಲಿದ್ದಾರೆ.












Click it and Unblock the Notifications