ಅನುಮಾನ ಬೇಡ, ನಾನೇ ಬಜೆಟ್ ಮಂಡಿಸುತ್ತೇನೆ!

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತೀಯ ಶಿಬಿರದಲ್ಲಿ ಆರೆಸ್ಸೆಸ್ ಗಣವೇಷದಲ್ಲಿ ಪಾಲ್ಗೊಂಡಿದ್ದ ಸದಾನಂದ ಗೌಡರು ತುಂಬಾ ಉತ್ಸಾಹದಲ್ಲಿದ್ದರು. ಮಾರ್ಚ್ 9 ರಂದು ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮಂಡಿಸುತ್ತೇನೆ.
ಒಂದು ತಿಂಗಳ ಕಾಲ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬಜೆಟ್ ಮಂಡನೆಗಾಗಿ ಪೂರ್ವ ತಯಾರಿ ನಡೆಸುತ್ತೇನೆ ಎಂದು ಸದಾನಂದ ಗೌಡರು ಹೇಳಿದರು.
ಆರೆಸ್ಸೆಸ್ ಪ್ರಾಂತೀಯ ಶಿಬಿರದಲ್ಲಿ ಸಾಮಾನ್ಯ ಸ್ವಯಂಸೇವಕನಾಗಿ ಪಾಲ್ಗೊಂಡಿದ್ದೇನೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶಗಳಿಲ್ಲ. ಯಡಿಯೂರಪ್ಪ ಅವರ ಗೈರು ಹಾಜರಿ ಬಗ್ಗೆ ಅವರನ್ನೇ ಕೇಳುವುದು ಉತ್ತಮ ಎಂದು ಸದಾನಂದ ಗೌಡರು ಹೇಳಿದ್ದಾರೆ.
ಸದಾನಂದ ಗೌಡ ಹಾಗೂ ಯಡಿಯೂರಪ್ಪ ಇಬ್ಬರಲ್ಲಿ ಯಾರು ಒಂದು ಲಕ್ಷ ಕೋಟಿ ಭಾರಿ ಬಜೆಟ್ ಮಂಡನೆ ಸುವರ್ಣವಕಾಶ ಪಡೆಯುತ್ತಾರೆ ಎಂಬ ಕುತೂಹಲ ಎಲಲ್ರಲ್ಲೂ ಮನೆ ಮಾಡಿತ್ತು. ಆದರೆ, ಆರೆಸ್ಸೆಸ್ ಕೃಪಾಕಟಾಕ್ಷದಿಂದ ಸದಾನಂದ ಗೌಡರು ಮಾರ್ಚ್ ತಿಂಗಳಿನಲ್ಲಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ.












Click it and Unblock the Notifications