ತಂದೆ ಅಂತ್ಯಕ್ರಿಯೆಗೆ ಮಧು ಗೂಂಡಾಗಳ ತಂದಿದ್ದ:ಕುಮಾರ
ಸೊರಬ,
ಜ. 26: ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಅಂತ್ಯಕ್ರಿಯೆ ಸಂದರ್ಭದಲ್ಲಿ ತನ್ನ ಕಿರಿಯ ಸೋದರ ಮಧು ಬಂಗಾರಪ್ಪ ಬೆಂಗಳೂರಿನಿಂದ 25-30 ಜನ ಬಾಡಿಗೆ ಗೂಂಡಾಗಳನ್ನು ಕರೆಸಿದ್ದ ಎಂದು ಬಂಗಾರಪ್ಪನವರ ಹಿರಿಯ ಪುತ್ರ ವಸಂತ್ ಕುಮಾರ ಬಂಗಾರಪ್ಪ ಗಂಭೀರ ಆರೋಪ ಮಾಡಿದ್ದಾರೆ. id="toptextpromo">ಇಲ್ಲಿನ
ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಎಸ್ ಬಂಗಾರಪ್ಪ ಅವರ ತಿಂಗಳ ಶ್ರದ್ಧಾಂಜಲಿಯಲ್ಲಿ ಭಾಗವಹಿಸಿ ಮಾತನಾಡಿದ ವಸಂತ್ ಕುಮಾರ ಬಂಗಾರಪ್ಪ ಈ ಮಾಹಿತಿ ನೀಡಿದರು. ಅಂತ್ಯಕ್ರಿಯೆ ಸ್ಥಳಕ್ಕೆ ಗೂಂಡಾಗಳು ಬಂದಿರುವ ಬಗ್ಗೆ ಪೊಲೀಸರು ನನಗೆ ಹೇಳಿದರು. ಜತೆಗೆ, ಪರಿಸ್ಥಿತಿ ಗಂಭೀರವಾಗಿರುವುದರಿಂದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದಂತೆಯೂ ತಾಕೀತು ಮಾಡಿದರು ಎಂದು ಕುಮಾರ ಬಂಗಾರಪ್ಪ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಅಪ್ಪನ
ಅಂತ್ಯಕ್ರಿಯೆ ಸಂದರ್ಭದಲ್ಲಿ ಇಡೀ ಕುಟುಂಬವೇ ನನ್ನನ್ನು ದೂರ ಉಳಿಯುವಂತೆ ಮಾಡಿತ್ತು. ಕುಟುಂಬದಲ್ಲಿ ಕೆಲವು ವೈಮನಸ್ಸುಗಳು ಬರುವುದು ಸಹಜ. ಾದರೆ ಅದನ್ನ ದೊಡ್ಡದು ಮಾಡುವುದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ಲೆಕ್ಕಾಚಾರದ ಮಾತು ನುಡಿದರು.











Click it and Unblock the Notifications