ಬಂಗಾರಪ್ಪ ಸಾಧನೆಗೆ ಕಾಂಗ್ರೆಸ್‌ ಶ್ರೀರಕ್ಷೆ: ಕುಮಾರ

bangarappa-achievements-cong-gifts-kumar
ಸೊರಬ, ಜ. 26: ಕುಟುಂಬದಿಂದ ಬೇರ್ಪಟ್ಟು, ಸಮನಾಂತರ ಶಕ್ತಿಯಾಗಿ ಬೆಳೆಯಲು ಹವಣಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಹಿರಿಯ ಪುತ್ರ ವಸಂತ್ ಕುಮಾರ ಬಂಗಾರಪ್ಪ ತಾವು ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷದ ಪರ ಮತ್ತೊಮ್ಮೆ ಬ್ಯಾಟಿಂಗ್ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರನ್ನು ರಾಜಕೀಯ ಶಕ್ತಿಯಾಗಿ ಬೆಳೆಸಿ, ಅಧಿಕಾರ ನೀಡಿದ್ದು ಕಾಂಗ್ರೆಸ್‌ ಪಕ್ಷ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಇಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಎಸ್‌ ಬಂಗಾರಪ್ಪ ಅವರ ತಿಂಗಳ ಶ್ರದ್ಧಾಂಜಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಂಗಾರಪ್ಪ ಅವರ 40 ವರ್ಷಗಳ ರಾಜಕೀಯ ಜೀವನದಲ್ಲಿ ಕಾಂಗ್ರೆಸ್‌ ಪಕ್ಷದ ಕೊಡುಗೆ ಅನನ್ಯ.

ಆದರೆ ಎಸ್‌ ಬಂಗಾರಪ್ಪ ಕೆಲವು ಸಂದರ್ಭದಲ್ಲಿ ಕಾಂಗ್ರೆಸ್‌ ಬಿಟ್ಟು, ಪಕ್ಷದೊಳಗೆ ಗೊಂದಲ ನಿರ್ಮಾಣ ಮಾಡಿದ್ದು ದುರದೃಷ್ಟಕರ. ಹೀಗಿದ್ದೂ ಕೂಡಾ ಪಕ್ಷ ಬಂಗಾರಪ್ಪರನ್ನು ಎಂದೂ ಕೈಬಿಟ್ಟಿಲ್ಲ. ಅವರ ವರ್ಚಸ್ಸಿಗೆ ಧಕ್ಕೆ ತರುವ ಯಾವುದೇ ಕೆಲಸಗಳನ್ನು ಮಾಡಿಲ್ಲ ಎಂದು ಹೇಳಿದರು.

ಈಗಲೂ ಅಷ್ಟೇ ಬಂಗಾರಪ್ಪನವರ ಬಂಗಾರಪ್ಪ ಅವರ ಚಿಂತನೆ ಹಾಗೂ ಯೋಜನೆಗಳು ಸಾಕಾರಗೊಳ್ಳಬೇಕಾದರೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಅವರ ಜನಪರ ಕಾಳಜಿಯ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲವಾಗಿ ನಿಂತು ಎಲ್ಲವನ್ನೂ ಪೂರೈಸಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+