4 ವಿಧೇಯಕ ಮಂಡನೆ, ಪಕ್ಷಗಳ ಕಿತ್ತಾಟಕ್ಕೆ ವೇದಿಕೆ ಸಜ್ಜು

ಉಳಿದ 8 ದಿನಗಳಲ್ಲಿ ಒಂದು ದಿನ ರಾಜ್ಯಪಾಲರ ಭಾಷಣದ ಬಗ್ಗೆ ಚರ್ಚೆ, ಪ್ರಶ್ನೋತ್ತರ ನಡೆಯಲಿದೆ. ಪ್ರಮುಖವಾಗಿ ನಾಲ್ಕು ವಿಧೇಯಕಗಳು ಮಂಡನೆಯಾಗಲಿದ್ದು, ಚರ್ಚೆಗೆ ಕಾಲಾವಕಾಶ ಸಾಕೇ? ಎಂಬ ಪ್ರಶ್ನೆ ಎದ್ದಿದೆ. ಆದರೂ ಈ ಬಾರಿ ಸುಮಾರು 674 ಪ್ರಶ್ನೆಗಳು ಬಂದಿದ್ದು ಆ ಪೈಕಿ 112 ಸ್ವೀಕಾರವಾಗಿವೆ ಎಂದು ಸ್ಪೀಕರ್ ಬೋಪಯ್ಯ ಹೇಳಿದ್ದಾರೆ.
* 'ಕರ್ನಾಟಕ ಪೌರಸಭೆಗಳು ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ)ವಿಧೇಯಕ-2011'(ಮಂಡನೆ, ಅನುಮೋದನೆ ಚರ್ಚೆ)
* ಸಹ್ಯಾದ್ರಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2011 (ಅನುಮೋದನೆಗಾಗಿ ಚರ್ಚೆ)
* 'ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ವಿಧೇಯಕ-2011' (ಅನುಮೋದನೆಗಾಗಿ ಚರ್ಚೆ)
* ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ-2007 (ಪುನರ್ ಪರಿಶೀಲನೆ ಮಂಡನೆ)
ವಿಧಾನಪರಿಷತ್ತಿನಲ್ಲಿ 7 ವಿಧೇಯಕಗಳು ಮಂಡನೆಗೆ ಸಿದ್ಧವಾಗಿದೆ. 450 ಪ್ರಶ್ನೆಗಳು ಬಂದಿದ್ದು ಅದರಲ್ಲಿ 135 ಪ್ರಶ್ನೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದ್ದಾರೆ. ಖಾಸಗಿ ಕಲಾಪದಡಿಯಲ್ಲಿ ಎಂ.ಸಿ.ನಾಣಯ್ಯ ಅವರು ವಿಧೇಯಕವೊಂದರನ್ನು ಮಂಡಿಸಲಿದ್ದಾರೆ. ನಿಯಮ 72 ಗಮನ ಸೆಳೆಯುವ ಸೂಚನೆ ಅಡಿಯಲ್ಲಿ 16 ಸೂಚನೆಗಳು ಬಂದಿದ್ದು ಚರ್ಚೆಗೆ ಅವಕಾಶವಿದೆ ಎಂದು ಡಿಎಚ್ ಶಂಕರಮೂರ್ತಿ ಅವರು ಹೇಳಿದ್ದಾರೆ.
ರಾಜಕೀಯ ಅಸ್ಥಿರತೆ ನಡುವೆ ಅಧಿವೇಶನ ಆಡಳಿತ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ನಾಂದಿಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಅಧಿವೇಶನದ ನಂತರ ರಾಜಕೀಯ ಚಿತ್ರಣ ಬದಲಾಗುವ ಇಂಗಿತವನ್ನು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಈಗಾಗಲೇ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಗುಪ್ತ ಸಭೆಗಳಿಗೂ ಕೂಡಾ ಅಧಿವೇಶನ ವೇದಿಕೆಯಾಗುವ ಸಾಧ್ಯತೆಯಿದೆ.











Click it and Unblock the Notifications